Breaking:

ಬಂಟ್ವಾಳ: ಮುಂದುವರಿದ ಮಳೆ, ವಿವಿಧೆಡೆ ಹಾನಿ

  • ಬಂಟ್ವಾಳ: ತಾಲೂಕಿನಾದ್ಯಂತ ಇಂದು ಮಳೆಯ ಆರ್ಭಟ ಜೋರಾಗಿದ್ದು, ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ.
  • ಪುದು ಗ್ರಾಮದ ಸುಜೀರು ಎಂಬಲ್ಲಿ ಸುಶೀಲ ಎಂಬವರ ಮನೆ ಹತ್ತಿರದ ಬಂಡೆ ಕಲ್ಲು ಕುಸಿದು ಬಿದ್ದಿದ್ದು ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
  • ವೀರಕಂಭ ಗ್ರಾಮದ ಮಜಿ ಎಂಬಲ್ಲಿ ಯೋಗಿನಿ ಎಂಬವರ ಮನೆಗೆ ಭಾಗಶ: ಹಾನಿಯಾಗಿರುತ್ತದೆ. ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಪ್ರಮೀಳಾ ಕೋಂದಿ ಸುರೇಂದ್ರಶೆಟ್ಟಿಯವರ ಪಕ್ಕಾಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
  • ಕರಿಯಂಗಳ ಗ್ರಾಮದ ಪೊಳಲಿ ಜನಾರ್ಧನ ದೇವಾಡಿಗ ರವರ ಮನೆಯ ಸೀಟು ಗಾಳಿಗೆ ಹಾರಿ ಹೋಗಿದ್ದು ಮನೆಯ ಸಾಮಾಗ್ರಿಗಳು ಹಾನಿಗೊಂಡಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.

Share this article

ಟಾಪ್ ನ್ಯೂಸ್