ನವದೆಹಲಿ; ನಾಲ್ವರು ನಾಮನಿರ್ದೇಶಿತ ಬಿಜೆಪಿ ಸಂಸದರು ಇತ್ತೀಚೆಗೆ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲಿ ಬಹುಮತ ಕಳೆದುಕೊಂಡಿದೆ. ಮೇಲ್ಮನೆಯಲ್ಲಿ ಪ್ರಸ್ತುತ ಒಟ್ಟು ಬಲವು 225 ಆಗಿದ್ದು, ಬಹುಮತ ಹೊಂದಲು 113 ಸದಸ್ಯರ ಅಗತ್ಯವಿದೆ.
ಆದರೆ ಬಿಜೆಪಿಯ 86 ಸದಸ್ಯರನ್ನು ಸೇರಿ ಎನ್‌ಡಿಎ 101 ಸಂಖ್ಯಾಬಲ ಹೊಂದಿದೆ. ಬಹುಮತಕ್ಕೆ 12 ಸದಸ್ಯರ ಕೊರತೆ ಉಂಟಾಗಿದೆ.
ರಾಕೇಶ್ ಸಿನ್ಹಾ, ರಾಮ್ ಶಕಲ್, ಸೋನಾಲ್ ಮಾನ್ಸಿಂಗ್ ಮತ್ತು ಮಹೇಶ್ ಜೇಠ್ಮಲಾನಿ ಅವರು ಸದನದಿಂದ ನಿರ್ಗಮಿಸಿದ್ದಾರೆ.