ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ತೊರೆದಿರುವ ಹಲವು ನಾಯಕರು ಹಾಗೂ ಕಾರ್ಪೊರೇಟರ್‌ಗಳು, ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಮತ್ತೆ ವಾಪಾಸ್ಸಾಗಿದ್ದಾರೆ.
ಪುಣೆಯಲ್ಲಿನ ಶರದ್ ಪವಾರ್ ನಿವಾಸದಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆಯಾದ ನಾಯಕರ ಪೈಕಿ ಪಿಂಪ್ರಿ-ಚಿಂಚ್ವಾಡ್ ಎನ್‌ಸಿಪಿ (ಅಜಿತ್ ಪವಾರ್ ಬಣ) ಘಟಕದ ಮುಖ್ಯಸ್ಥರಾದ ಅಜಿತ್ ಗವ್ಹಾನೆ ಕೂಡಾ ಸೇರಿದ್ದಾರೆ. ಇವರೊಂದಿಗೆ, ಪಿಂಪ್ರಿ-ಚಿಂಚ್ವಾಡ್ ಘಟಕದ ಹಿರಿಯ ನಾಯಕರು ಮಂಗಳವಾರ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ರಾಜೀನಾಮೆ ಸಲ್ಲಿಸಿದ್ದರು.