ಶ್ರೀಲಂಕಾ ಅಂಡರ್ 19 ತಂಡದ ಮಾಜಿ ನಾಯಕ ಧಮಿಕಾ ನಿರ್ಶೋನಾ ಅವರನ್ನು ಮಂಗಳವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆಯು ಮಾಜಿ ಕ್ರಿಕೆಟಿಗ ಖಂಂಡಾ ಮವಾತಾ ಅವರ ನಿವಾಸದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಈ ಘಟನೆ ನಡೆಯುವ ವೇಳೆಯಲ್ಲಿ ಧಮಿಕಾ ನಿರ್ಶೋನಾ ಅವರ ಜತೆ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಜತೆಗಿದ್ದರು ಎನ್ನಲಾಗುತ್ತಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಶವಪರೀಕ್ಷೆಗೆ ಕಳಿಸಿಕೊಟ್ಟಿದ್ದಾರೆ. ತನಿಖೆಯಿಂದಷ್ಟೇ ಈ ಪ್ರಕರಣ ಕುರಿತಂತೆ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.