Breaking:

ಪುತ್ತೂರು; ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ; ಯುವಕನಿಂದ ಆರೋಪ

ಪುತ್ತೂರು; ಮನೆಗೆ ನುಗ್ಗಿ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನೋರ್ವ ಆರೋಪಿಸಿದ್ದಾರೆ.

 ಈಶ್ವರಮಂಗಲ ಪಂಚೋಡಿ ನಿವಾಸಿ, ಪುತ್ತೂರು ಕಂಪೆನಿಯೊಂದರಲ್ಲಿ ಎಸಿ ಟೆಕ್ನೀಷಿಯನ್‌ ಆಗಿರುವ ಭ್ರಮೀಷ್‌ ಅವರಿಗೆ ಮನೆಗೆ ನುಗ್ಗಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ

ಭ್ರಮೀಷ್‌ ಹಲ್ಲೆ ಆರೋಪಿಸಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ನಾನು ರಾತ್ರಿ ಗಂಟೆ 11ಕ್ಕೆ ಮನೆಯಲ್ಲಿ ಮಲಗಿದ್ದೆ. ಈ ವೇಳೆ ಬಾಗಿಲು ಬಡಿದ ಶಬ್ದ ಆಯಿತು. ಬಾಗಿಲು ತೆರೆದಾಗ ಲೈಟ್‌ ಹಾಕಿ ಮನೆಯಲ್ಲಿ ಯಾರು ಇಲ್ಲವಾ ಎಂದು ಕೇಳಿದರು. ಯಾರು ಇಲ್ಲ ಎಂದು ಹೇಳಿದಾಗ ನನ್ನ ತಂದೆಗೆ ಅವಾಚ್ಯವಾಗಿ ಬೈದು ನನ್ನ ಕಾಲರ್‌ ಹಿಡಿದೆಳೆದು ನಾಲ್ವರು ಪೊಲೀಸರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಯುವಕ ದೂರಿದ್ದಾರೆ.

ಪಂಚೋಡಿ ವೈನ್ ಶಾಪ್ ಬಳಿ ಗಲಾಟೆ ನಡೆದಿತ್ತು. ಆದರೆ ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಮನೆಯಲ್ಲಿದ್ದೆ. ಪೊಲೀಸರು ನನ್ನನ್ನು ಅದೇ ವಿಚಾರದಲ್ಲಿ ತಪ್ಪು ಮಾಹಿತಿಯಿಂದ ನನಗೆ ಹಲ್ಲೆ ನಡೆಸಿದ್ದಾರೆ. ಆದರೆ ವಿಚಾರಣೆ ಮಾಡಬಹುದಿತ್ತು. ಅದನ್ನು ಮಾಡದೆ ಯಾವುದೇ ಮಾಹಿತಿ ಪಡೆಯದೇ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಭ್ರಮೀಷ್ ಅವರು ಆರೋಪಿಸಿದ್ದಾರೆ.

Share this article

ಟಾಪ್ ನ್ಯೂಸ್