ಮಂಗಳೂರು ನಗರದ ಬೀಬಿ ಅಲಾಬಿ ರಸ್ತೆಯಲ್ಲಿರುವ ಲಕ್ಷ್ಮಣ್ ಹರಿ ಕಟ್ಟಡದಲ್ಲಿರುವ ಅಂಗಡಿಯೊಂದರಲ್ಲಿ ಗೋದ್ರೆಜ್ ಕಂಪೆನಿ ಹೆಸರಿನ ನಕಲಿ ಹಾಗೂ ದೋಷಪೂರಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕೇಸ್ ದಾಖಲಾಗಿದೆ.
ಕಂಪೆನಿಯ ಅಧಿಕೃತ ಪ್ರತಿನಿಧಿಗಳು ಆ.1ರಂದು ಮಂಗಳೂರಿಗೆ ಬಂದು ಮಾಹಿತಿ ಸಂಗ್ರಹಿಸುವಾಗ ಗೋದ್ರೆಜ್ ಕಂಪೆನಿಯ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡುಕೊಂಡಿದ್ದಾರೆ.
ಈ ಬಗ್ಗೆ ಅಂಗಡಿಯ ಮಾಲಕರ ವಿರುದ್ಧ ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಇದೀಗ ಪ್ರಕರಣ ದಾಖಲಾಗಿದೆ.