Breaking:

ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಬೆದರಿಸಿ ಲಿಂಗ ಪರಿವರ್ತನೆ? ಮಂಗಳ ಮುಖಿಯರ ವಿರುದ್ಧ ಗಂಭೀರ ಆರೋಪ

ಸಿಲಿಕಾನ್ ಸಿಟಿಯಲ್ಲಿ ‌ಮಂಗಳಮುಖಿಯರು ಟೀ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಯುವಕನನ್ನು ಲಿಂಗ ಪರಿವರ್ತನೆ ಮಾಡಿ ಭಿಕ್ಷಾಟನೆಗೆ ಒತ್ತಾಯಿಸಿದ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಫ್ರೇಜರ್ ಟೌನ್ ನಲ್ಲಿ  ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ, ಮುಗಿಲಿ ಎನ್ನುವ ಐದು ಮಂದಿ ವಿರುದ್ಧ ಕಸೀಪಾ ಅಲಿಯಾಸ್ ಮೊಹಮ್ಮದ್ ಅಬೂಬಕ್ಕರ್ ಸೇಠ್ ಪುಲಿಕೇಶಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

ನಾನು ಮೂರು ವರ್ಷಗಳ ಹಿಂದೆ ಅಂಬೇಡ್ಕರ್ ಕಾಲೇಜ್ ಬಳಿ ಬರ್ಕತ್ ಎಂಬುವವರ ಟೀ ಅಂಗಡಿಯಲ್ಲಿ ಕೆಲಸವನ್ನು ಮಾಡಿಕೊಂಡಿದ್ದೆನು. ಈ ಸಮಯದಲಿ. ಟೀ ಸ್ಮಾಲ್‌ನಲ್ಲಿ ಟೀ ಕುಡಿಯಲು ಬರುತ್ತಿದ್ದ ಚಿತ್ರ, ಅಶ್ವಿನಿ, ಕಾಜಲ್, ಪ್ರೀತಿ, ಮುಗಿಲ ರವರು ನನಗೆ ಪರಿಚಯವಾಗಿ ನಮ್ಮ ಜೊತೆ ಬಂದರೆ ನಿನ್ನನ್ನು ಒಳ್ಳೆಯ ಮನೆಯಲ್ಲಿರಿಸಿ ಒಳ್ಳೆಯ ಸಂಪಾದನೆಗೆ ದಾರಿ ಮಾಡಿಕೊಡುವುದಾಗಿ ಪುಸಲಾಯಿಸಿದರು ನಾನು ಒಪ್ಪದೇ ಇದ್ದಾಗ ನನ್ನನ್ನು ಹೆದರಿಸಿ ಬೆದರಿಸಿ ಟ್ಯಾನರಿ ರಸ್ತೆಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿ ಮನೆಯವರಿಗೆ ಕೊಲೆ ಮಾಡಿಸುತ್ತೇನೆಂದು ಬೆದರಿಕೆ ಒಡ್ಡಿ ನನ್ನ ಬಳಿಯಿಂದ ಮೂರು ವರ್ಷಗಳ ಕಾಲ ಭಿಕ್ಷಾಟನೆ ಮಾಡಿಸಿ ದುಡಿಸಿಕೊಂಡಿರುತ್ತಾರೆ.

ಜುಲೈ 12, 2024 ರಂದು ರಾತ್ರಿ 8.30 ಗಂಟೆಗೆ, ನೀನು ಗಂಡಸಾಗಿರುವಾಗಲೇ ಪ್ರತಿ ದಿನ 2 ಸಾವಿರ ಹಣವನ್ನು ದುಡಿದು ಕೊಡುತ್ತೀಯ ಹೆಣ್ಣಾದರೆ ಇನ್ನೂ ಎಷ್ಟು ಹಣವನ್ನು ದುಡಿದುಕೊಡುತ್ತೀಯ ಎಂದು ಹೇಳಿ ಹೆಣ್ಣಾಗು ಎಂದು ಹೇಳಿ ನನ್ನ ಇಚ್ಛೆಗೆ ವಿರುದ್ಧವಾಗಿ ಚಿತ್ರ, ಆಶ್ವಿನಿ, ಕಾಜಲ್, ಪ್ರೀತಿ, ಮುಗಿಲ ಎಂಬುವವರು ಗಾಂಜಾ ಸೇವಿಸಿ, ಮಧ್ಯಪಾನ ಮಾಡಿಕೊಂಡು ಒರ್ವ ಹೆಂಗಸರನ್ನು ಕರೆದುಕೊಂಡು ನನಗೆ ಯಾವುದೋ ಇಂಜೆಕ್ಷನ್ ಅನ್ನು ಕೊಡಲು ಬಂದಾಗ ನಾನು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ಐದು ಜನ ನನ್ನನ್ನು ಹಿಡಿದುಕೊಂಡು ನನಗೆ ಬಲವಂತವಾಗಿ ಬಗ್ಗಿಸಿ ಬೆನ್ನಿಗೆ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿ ಮರ್ಮಾಂಗವನ್ನು ಕತ್ತರಿಸಿರುತ್ತಾರೆ.

ನಾನು ಎಚ್ಚರವಾದಾಗ ನನ್ನ ಮರ್ಮಾಂಗದ ಬಳಿ ರಕ್ತಗಾಯವಾಗಿದ್ದು ಪೈಪನ್ನು ಅಳವಡಿಸಿರುತ್ತಾರೆ. ನಂತರ ಆಗಸ್ಟ್ 3 ರವರೆಗೆ ಮನೆಯಲ್ಲಿಯೇ ಕೂಡಿ ಹಾಕಿ, ಮನೆ ಮೇಲೆ ಕರೆದುಕೊಂಡು ಹೋಗಿ ಯಾವುದೋ ಪೂಜೆ ಮಾಡಿಸಿರುತ್ತಾರೆ. ನಂತರ ನನ್ನನ್ನು ಭಿಕ್ಷಾಟನೆ ಮಾಡಿಕೊಂಡು ಬರುವಂತೆ ಹಾಗೂ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವಂತೆ ಒತ್ತಾಯಿಸಿ ಐದು ಲಕ್ಷ ಕೊಡುವಂತೆ ಬೆದರಿಸಿದರು. ನಂತರ ಹೇಗೋ ನಾನು ತಪ್ಪಿಸಿಕೊಂಡು ಬಂದು ದೂರನ್ನು ನೀಡುತ್ತಿದ್ದು ನನಗೆ ಬಲವಂತವಾಗಿ ಮರ್ಮಾಂಗ ಕತ್ತರಿಸಿ ಗಾಯಮಾಡಿ ಶಾಶ್ವತವಾಗಿ ಗಾಯ ಮಾಡಿ ಮನೆಯಲ್ಲಿ ಕೂಡಿ ಹಾಕಿದ್ದ ಚಿತ್ರ, ಅಶ್ವಿನಿ, ಕಾಜಲ್, ಪ್ರೀತಿ, ಮುಗಿಲ ಎಂಬುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Share this article

ಟಾಪ್ ನ್ಯೂಸ್