Breaking:

ಏಲಿಯನ್ಸ್‌ ಮಾನವರನ್ನು ಎರೆಹುಳಗಳಂತೆ ಪರಿಗಣಿಸುತ್ತಿವೆ, ಇದು ಅಪಾಯಕಾರಿ; ಇಸ್ರೋ ಅಧ್ಯಕ್ಷ ಸೋಮನಾಥನ್ ಸ್ಪೋಟಕ ಹೇಳಿಕೆ

ಇಸ್ರೋ ಅಧ್ಯಕ್ಷ ಸೋಮನಾಥನ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದು, ಏಲಿಯನ್ಸ್‌ ನಮ್ಮ ಸುತ್ತಮುತ್ತಲಿದ್ದು, ಬಹುಶಃ ಅವು ಮಾನವ ನಾಗರಿಕತೆ ಮತ್ತು ಮಾನವರನ್ನು ಎರೆಹುಳಗಳಂತೆ ಪರಿಗಣಿಸುತ್ತಿವೆ ಎಂದು ಹೇಳಿದ್ದಾರೆ.

ನಾವು ಮನುಷ್ಯರು ಇತ್ತೀಚೆಗೆ ಭೂಮಿಯಲ್ಲಿ ಹುಟ್ಟಿಕೊಂಡ ಜೀವರಾಶಿ, ಈ ಜೀವ ಜಗತ್ತಿನ ಎಲ್ಲೆಡೆ ಮಾನವನಿಗಿಂತಲೂ ಹೆಚ್ಚು ವಿಕಾಸಗೊಂಡಿರುವ ಜೀವರಾಶಿಗಳಿವೆ ಎಂದು ಅವರು ಹೇಳಿದ್ದಾರೆ.

ರಣ್ವೀರ್‌ ಅಲಹಾಬಾದ್‌ ಪಾಡ್‌ಕಾಸ್ಟ್‌ ನಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷರು, ಮಾನವ ಮತ್ತು ಏಲಿಯನ್ಸ್‌ ಮುಖಾಮುಖಿಯಾಗುವ ಸನ್ನಿವೇಶ ಅಪಾಯಕಾರಿ. ಅಂತಹ ಸಂದರ್ಭ ಬಂದರೂ ಆಶ್ಚರ್ಯವಿಲ್ಲ. ಹಾಗಾದಾಗ ನಮ್ಮ ಮೇಲೆ ಏಲಿಯನ್‌ಗಳು ಹಾಗೂ ಮಾನವರು ಏಲಿಯನ್‌ಗಳ ಮೇಲೆ ಅಧಿಪತ್ಯ ಸಾಧಿಸಲು ಹೋರಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Share this article

ಟಾಪ್ ನ್ಯೂಸ್