Breaking:

ಅಡ್ಕತ್ತಬೈಲು ಮುಹಮ್ಮದ್ ಹಾಜಿ ಕೊಲೆ ಪ್ರಕರಣ, ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ

ಕಾಸರಗೋಡಿನಲ್ಲಿ 2008ರಲ್ಲಿ ಗಲಭೆ ಸಂದರ್ಭ ಅಡ್ಕತ್ತಬೈಲ್ ಸಮೀಪದ ಸಿ.ಎ.ಮುಹಮ್ಮದ್ ಹಾಜಿ (56) ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳಿಗೆ ಕಠಿಣ ಜೀವಾವಧಿ ಸಜೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಸಂತೋಷ್ ನಾಯ್ಕ್ (36), ಕೆ. ಶಿವ ಪ್ರಸಾದ್ (40) , ಕೆ. ಅಜಿತ್ ಕುಮಾರ್ (39), ಕಿಶೋರ್ ಕುಮಾರ್ (39) ಶಿಕ್ಷೆಗೊಳಗಾದ ಆರೋಪಿಗಳು.

2008ರ ಎ.18ರಂದು ಮಸೀದಿಯಿಮದ ಮನೆಗೆ ತೆರಳುವಾಗ ಮುಹಮ್ಮದ್ ಹಾಜಿ ಅವರನ್ನು ಕಡಿದು ಕೊಲೆ ಮಾಡಲಾಗಿತ್ತು.

ಕಾಸರಗೋಡು ಎಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ತನಿಖೆಯ ನಡೆಸಿದ್ದರು. ದಿನಗಳ ಕಾಲ ನಡೆದ ಗಲಭೆಯಲ್ಲಿ ನಾಲ್ವರು ಕೊಲೆಗೀಡಾಗಿದ್ದರು.



2008ರ ಎ.14ರಂದು ಕಾಸರಗೋಡು ಬೀಚ್ ರಸ್ತೆಯ ಸಂದೀಪ್ (20) ಎಂಬವರ ಕೊಲೆ ಬಳಿಕ ಗಲಭೆ ಉಂಟಾಗಿ ನಾಲ್ವರ ಕೊಲೆಯಲ್ಲಿ ಕೊನೆಗೊಂಡಿತ್ತು.

Share this article

ಟಾಪ್ ನ್ಯೂಸ್