Breaking:

ಅಜ್ಮೀರ್ ಯಾತ್ರೆಗೆಂದು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆ

ಅಜ್ಮೀರ್ ಯಾತ್ರೆಗೆ ಹೋಗಿ ಬರುತ್ತೇವೆ ಎಂದು ಹೇಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾದ ಘಟನೆ ಬಳ್ಳಾರಿಯ ಜಯನಗರದಲ್ಲಿ ನಡೆದಿದೆ.

ಕೌಲ್‍ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ
ಶ್ರೀನಿವಾಸ್ ಅಪಾರ್ಟಮೆಂಟ್‍ನಲ್ಲಿದ್ದ ಎಂ.ಎಸ್.ನಜೀರ್ ಅಹಮದ್(50), ಪತ್ನಿ ಮುನಿಯಾರ್ ರೊಖಾಯಾ(47) ಮಕ್ಕಳಾದ ಎಂ.ಎಸ್.ಸಾನಿಯ ಕೌಸರ್(21), ಶಗುಪ್ತ ಅಂಜುಮ್(15)ನಾಪತ್ತೆಯಾಗಿದ್ದಾರೆ.

ಈ ಕುಟುಂಬವು ಜುಲೈ 7 ರಂದು ಅಜ್ಮೀರ್‍ಗೆ ಹೋಗುವುದಾಗಿ ಹೇಳಿ, ಈವರೆಗೂ ಹಿಂದಿರುಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Share this article

ಟಾಪ್ ನ್ಯೂಸ್