Breaking:

ಮನೆ ಕುಸಿದು ಬಿದ್ದು ಬಾಲಕಿ ಮೃತ್ಯು; ಹೃದಯವಿದ್ರಾಹಕ ಘಟನೆ ವರದಿ

ಮನೆಯೊಂದು‌ ಕುಸಿದ ಪರಿಣಾಮ ಆಟವಾಡಲು ತೆರಳಿದ್ದ ಬಾಲಕಿಯೊಬ್ಬಳು‌ ಮೃತಪಟ್ಟ ಘಟನೆ‌ ಧಾರವಾಡ ಜಿಲ್ಲೆಯಕುಂದಗೋಳ ಪಟ್ಟಣದ ಸಾದಗೇರಿ ಓಣಿಯಲ್ಲಿನ ಮನೆಯೊಂದರಲ್ಲಿ ನಡೆದಿದೆ.

ಅಮೃತಾ ಗದಿಗೆಪ್ಪ ಮೆಣಸಗೊಂಡ (5) ಮೃತಪಟ್ಟ ಬಾಲಕಿಯಾಗಿದ್ದಾಳೆ.

ನಾಗರ ಪಂಚಮಿಯಂದು ಆಟವಾಡುವ ಸಲುವಾಗಿ ಬಾಲಕಿಯು ಪಕ್ಕದ‌ ರಾಮಣ್ಣ ಕಾಳಪ್ಪ ಅರ್ಕಸಾಲಿ ಅವರ ಮನೆಗೆ ತೆರಳಿದ್ದಳು. ಇದೇ ಸಮಯ ಮಣ್ಣಿನ‌ ಮೇಲ್ಚಾವಣಿ ಕುಸಿದ ಪರಿಣಾಮ ಬಾಲಕಿ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾಳೆ.

ಮೃತ ಬಾಲಕಿಯ ಜೊತೆ ಆಟವಾಡುತ್ತಿದ್ದ ಇನ್ನೋರ್ವ ಬಾಲಕಿ ನಿಹಾರಿಕಾ ಕಮ್ಮಾರ (2) ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share this article

ಟಾಪ್ ನ್ಯೂಸ್