ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬೆಂಗಳೂರಿಗೆ ಬಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಸಭೆ ನಡೆಸಿದ್ದ ಪವನ್ ಕಲ್ಯಾಣ ಆನೆಗಳ ಸೆರೆ ಕಾರ್ಯಾಚರಣೆ, ಮತ್ತು ಪಳಗಿಸುವ ಕ್ರಮ, ಮಾವುತರಿಗೆ ತರಬೇತಿ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.
ಸಭೆ ಬಳಿಕ ತೆರಳಲು ಮುಂದಾದಾಗ ಪವನ್ ಕಲ್ಯಾಣ್ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಕಾರಿನ ಬಳಿ ಧಾವಿಸಿದ ಅರಣ್ಯ ಸಿಬ್ಬಂದಿಗಳು ಹಾವನ್ನು ಹರಸಾಹಸ ಪಟ್ಟು ಸೆರೆ ಹಿಡಿದಿದ್ದಾರೆ.