Breaking:

ಪುರಸಭಾ ಸದಸ್ಯನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ; ಧರ್ಮಸ್ಥಳಕ್ಕೆ ಬಂದು ನಿನ್ನೆಯಷ್ಠೇ ವಾಪಾಸ್ಸಾಗಿದ್ದವನನ್ನು ಹೊಂಚು ಹಾಕಿ ಹತ್ಯೆ

ಪುರಸಭೆ ಸದಸ್ಯನನ್ನು ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾದನಪುರದಲ್ಲಿ ನಡೆದಿದೆ.

ಬಾದನಪುರ ಕಾರ್ಪೊರೇಟರ್ ರವಿ ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.

ಬೆಂಗಳೂರು ಆನೇಕಲ್ ತಾಲೂಕಿನ ಪುರಸಭೆಯ ಸದಸ್ಯ ರವಿ ನಿನ್ನೆಯಷ್ಟೇ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳಿ ಮನೆಗೆ ವಾಪಸ್ ಆಗಿದ್ದರು. ಬಳಿಕ ರಾತ್ರಿ 8:45ಕ್ಕೆ ಮನೆ ಹೊರಗೆ ಹೋಗಿದ್ದ ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬಾದನಪುರ ಮೂಲದ ಹರೀಶ್ ಹಾಗೂ ವಿನಯ್ ಮತ್ತು ಕರ್ಪೂರ ಗ್ರಾಮದ ಜೆಕೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ‌.

 ಇನ್ನು ಘಟನಾ ಸ್ಥಳಕ್ಕೆ ಶಾಸಕ‌ ಶಿವಣ್ಣ ,ಬೆಂಗಳೂರು ಗ್ರಾಮಾಂತರ ಎಸ್ ಪಿ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this article

ಟಾಪ್ ನ್ಯೂಸ್