Breaking:

ನನ್ನ ತಂದೆಯ ಮೂಳೆಯನ್ನಾದರೂ ಹುಡುಕಿ ಕೊಡಿ: ಅಂಕೋಲಾ ಗುಡ್ಡೆ ಕುಸಿತದ ವೇಳೆ ನಾಪತ್ತೆಯಾದ ಜಗನ್ನಾಥ್ ಪುತ್ರಿಯ ಅಳಲು

ಅಂಕೋಲಾ ಗುಡ್ಡೆ ಕುಸಿತ ಸ್ಥಳದಲ್ಲಿ ಕೇರಳದ ಅರ್ಜುನ್ ಗೆ  ಮಾತ್ರವಲ್ಲದೆ ಜಗನ್ನಾಥ್ ಹಾಗೂ ಲೋಕೇಶ್ ಎಂಬುವವರಿಗೆ ಕೂಡ ಹುಡುಕಾಟ ನಡೆಯುತ್ತಿದೆ.

ಜುಲೈ 16ರಂದು ನಡೆದ ಗುಡ್ಡ ಕುಸಿತದಲ್ಲಿ ಜಗನ್ನಾಥ್ ಎಂಬುವವರು ಕಾಣೆಯಾಗಿದ್ದು, ಇಲ್ಲಿಯವರೆಗೂ ಅವರ ಸುಳಿವು ಕೂಡ ಸಿಕ್ಕಿಲ್ಲ. ಇದೀಗ ಅವರ ಮಗಳು ಪಲ್ಲವಿ ತಂದೆಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ತಂದೆ ಸಿಗದ ಹಿನ್ನೆಲೆ ಕಣ್ಣೀರಾಕಿರುವ ಪಲ್ಲವಿ, ನಮ್ಮ ತಂದೆ ಕಾಣೆಯಾಗಿ 12 ದಿನ ಆಯ್ತು. ಏನು ಸುದ್ದಿ ಇಲ್ಲ. ಅವರನ್ನು ಹುಡುಕಿಕೊಡಿ. ಅವರನ್ನು ನಾವೂ ನೋಡಬೇಕು. ಕಾರ್ಯಾಚರಣೆ ಬಗ್ಗೆ ಏನು ಗೊತ್ತಾಗುತ್ತಿಲ್ಲ. ಬರೀ ಅರ್ಜುನ್, ಲಾರಿ ಅಂತ ಮಾತ್ರ ಹೇಳುತ್ತಿದ್ದಾರೆ. ನಮ್ಮ ಅಪ್ಪನ ಬಗ್ಗೆ ಏನು ಮಾತನಾಡುತ್ತಿಲ್ಲ. ಸರ್ಕಾರದವರು, ಜನಪ್ರತಿನಿಧಿಗಳು ಹುಡುಕಿಕೊಡುತ್ತೇವೆ ಎನ್ನುತ್ತಿದ್ದಾರೆ. ಅಮ್ಮ ಸರಿಯಾಗಿ ಊಟ ಮಾಡುತ್ತಿಲ್ಲ. ಅವರ ಮೂಳೆ ಸಿಕ್ಕರೂ ಸಾಕು ಹುಡುಕಿಕೊಡಿ ಎಂದು ಪಲ್ಲವಿ ಮನವಿ ಮಾಡಿದ್ದಾರೆ.

Share this article

ಟಾಪ್ ನ್ಯೂಸ್