Breaking:

ಎಪಿ ಅಬೂಬಕ್ಕರ್ ಮುಸ್ಲಿಯಾರ್ ಗೆ ಸರಕಾರಿ ಗೌರವ; ತಗಾದೆ ತೆಗೆದ ಬಸವನಗೌಡ ಪಾಟೀಲ್ ಯತ್ನಾಳ್

ಆಗಸ್ಟ್‌ 2 ರಂದು ಬೆಂಗಳೂರಿನ ಸಿಎಂ ಕಾನ್ವೆನ್ಶನ್‌ನಲ್ಲಿ ಬೆಂಗಳೂರಿನ ಖಾಝಿ ಸ್ವೀಕಾರ ಸಮಾರಂಭ ಮತ್ತು ಕೂರತ್ ತಂಙಳ್ ಅವರ ಅನುಸ್ಮರಣೆ ನಡೆದಿತ್ತು. ಕಾರ್ಯಕ್ರಮಕ್ಕೆ ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅತಿಥಿಯಾಗಿ ಆಗಮಿಸಿದ್ದರು. ಬೆಂಗಳೂರಿಗೆ ಆಗಮಿಸಿದ್ದ ಉಸ್ತಾದರಿಗೆ ಸರಕಾರಿ ವಾಹನದಲ್ಲಿ ತೆರಳಲು ಅವಕಾಶವನ್ನು ಮಾಡಿಕೊಡಲಾಗಿತ್ತು. ಇದಕ್ಕೆ ಇದೀಗ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಗಾದೆ ತೆಗೆದಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ ಮಾಡಿರುವ ಬಸವನಗೌಡ ಪಾಟೀಲ್ ಯತ್ನಾಳ್, ಸರ್ಕಾರಕ್ಕೆ ಸಂಬಂಧವೇ ಇಲ್ಲದ ಈ ವ್ಯಕ್ತಿಗೆ ಯಾಕೆ ‘ಜಿ’ ಸಿರೀಸ್‌ ಕಾರ್‌ಅನ್ನು ಹಾಗೂ ಪೊಲೀಸ್‌ ಭದ್ರತೆ & ಪ್ರೊಟೋಕಾಲ್‌ಅನ್ನು ನೀಡಲಾಗಿದೆ. ಇದು ಶಿಷ್ಟಾಚಾರದ ನಿಯಗಳನ್ನು ಉಲ್ಲಂಘಿಸಿದ ಹಾಗೆ ಅಲ್ಲವೇ. ಅಲ್ಪಸಂಖ್ಯಾತರ ಮತಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಮುಖಂಡರಿಗೆ ಅನುಕೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲದೆ ತೆರಿಗೆದಾರರ ಹಣದ ಬೃಹತ್ ವ್ಯರ್ಥವೂ ಆಗಿದೆ. ರಾಜ್ಯವು ಮಳೆಯ ಅಬ್ಬರಕ್ಕೆ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರ ಹೀಗೆ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಎಪಿ ಅಬೂಬಕ್ಕರ್ ಅವರಿಗೆ ಸರಕಾರಿ ವಾಹನ ನೀಡಿದ್ದೇಕೆ?

ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರನ್ನು ಈ ಮೊದಲು ಸಿದ್ದರಾಮಯ್ಯ ಸರಕಾರ ರಾಜ್ಯದ ವಿಶೇಷ ಅಥಿತಿಗಳ ಸಾಲಿನಲ್ಲಿ ಪರಿಗಣಿಸಿ ಆದೇಶ ನೀಡಿತ್ತು. ಈ ಹಿನ್ನೆಲೆ ಈ ಗೌರವವನ್ನು ಮತ್ತು ಭದ್ರತೆಯನ್ನು  ನೀಡಲಾಗುತ್ತದೆ.

Share this article

ಟಾಪ್ ನ್ಯೂಸ್