ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಶಾಸಕರಿಗೆ ಇದ್ದ 2 ಗಂಟೆಗಳ ವಿರಾಮವನ್ನು ಅಸ್ಸಾಂ ವಿಧಾನಸಭೆ ಶುಕ್ರವಾರ ರದ್ದು ಮಾಡಿದೆ.
ಹೊಸ ನಿರ್ಧಾರದಿಂದಾಗಿ ಸದನದ ಉತ್ಪಾದಕತೆ ಹೆಚ್ಚಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.
2 ಗಂಟೆ ನಮಝ್ ವಿರಾಮವನ್ನು ರದ್ದು ಮಾಡುವ ಮೂಲಕ, ಅಸ್ಸಾಂ ವಿಧಾನಸಭೆಯು ಉತ್ಪಾದಕತೆಗೆ ಪ್ರಾತಿನಿಧ್ಯ ನೀಡಿದೆ. ಅಲ್ಲದೆ ವಸಾಹತು ಕಾಲದ ಆಚರಣೆಯನ್ನು ತಳ್ಳಿ ಹಾಕಿದೆ. ಈ ಪದ್ಧತಿಯನ್ನು 1937ರಲ್ಲಿ ಮುಸ್ಲಿಂ ಲೀಗ್‌ನ ಸೈಯದ್ ಸಾದುಲ್ಲಾ ಅವರು ಪ್ರಾರಂಭಿಸಿದ್ದರು. ಈ ನಿರ್ಧಾರ ತೆಗೆದುಕೊಳ್ಳಲು ಕಾರಣರಾದ ಸ್ಪೀಕರ್ ಬಿಸ್ವಜಿತ್ ಡೈಮರಿ ಹಾಗೂ ನಮ್ಮ ಪಕ್ಷದ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅಸ್ಸಾಂ ಸಿಎಂ ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.