Breaking:

ಅಸ್ಸಾಂನಲ್ಲಿ 1935ರ ಮುಸ್ಲಿಂ ವಿವಾಹ ಕಾಯ್ದೆ ರದ್ದು ಪಡಿಸಲು ಮುಂದಾದ ಸರಕಾರ!

ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ಅಪ್ರಾಪ್ತ ವಯಸ್ಸಿನವರಿಗೆ ವಿವಾಹ ಅವಕಾಶ ನೀಡುವ 1935ರ ಕಾಯ್ದೆಯನ್ನು ರದ್ದುಪಡಿಸಲು ಸರಕಾರ ನಿರ್ಧರಿಸಿದೆ.

ಷರತ್ತು ಪೂರೈಸುವುದರೊಂದಿಗೆ, ಈ ವಿವಾಹಕ್ಕೆ ಅವಕಾಶ ನೀಡುವ ಕಾಯ್ದೆಯನ್ನು ರದ್ದುಪಡಿಸುವ ಮಸೂದೆಯನ್ನು ಗುರುವಾರ ಸಂಪುಟ ಸಭೆ ಅಂಗೀಕರಿಸಿದೆ.

ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿದ್ದು, ಇದು ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ಹಾಗೂ ನಿಯಮಾವಳಿಗಳನ್ನು ರದ್ದುಪಡಿಸುತ್ತದೆ. ವಿಧಾನಸಭೆಯ ಮುಂದಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಬಾಲ್ಯವಿವಾಹವನ್ನು ಕೊನೆಗೊಳಿಸುವ ಉದ್ದೇಶದಿಂದ ವಿವಾಹ ನೋಂದಣಿ ಮತ್ತು ವಿಚ್ಛೇದನದಲ್ಲಿ ಏಕರೂಪತೆ ತರುವ ಅಗತ್ಯವಿದೆ ಎಂದು ಸಂಪುಟ ಸಭೆಯಲ್ಲಿ ಹೇಳಲಾಗಿದೆ.

Share this article

ಟಾಪ್ ನ್ಯೂಸ್