ಅಸ್ಸಾಂ ಸರ್ಕಾರ ತೆಗೆದುಕೊಂಡಿರುವ ನಮಾಜ್ ವಿರಾಮದ ರದ್ಧತಿ ಬಗ್ಗೆ ಎನ್ ಡಿಎ ಮಿತ್ರಪಕ್ಷ ವಿರೋಧವನ್ನು ವ್ಯಕ್ತಪಡಿಸಿದೆ.
ಈ ಕುರಿತು ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಸಂಸದ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಬಹಿರಂಗವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಸ್ಸಾಂ ರಾಜ್ಯ ಅಸೆಂಬ್ಲಿಯಲ್ಲಿ ಈ ಹಿಂದೆ ನಮಾಜ್ ಮಾಡಲು ಮುಸ್ಲಿಂ ಶಾಸಕರಿಗೆ ಪ್ರತಿ ಶುಕ್ರವಾರದ ಎರಡು ಗಂಟೆಗಳ ವಿರಾಮವನ್ನು ನೀಡಲಾಗುತ್ತಿತ್ತು. ಇದೀಗ ಅಸ್ಸಾಂ ಬಿಜೆಪಿ ಸರ್ಕಾರ ಇದನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಸರ್ಕಾರದ ಈ ನಿರ್ಧಾರ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪ್ರತಿಪಾದಿಸಿದೆ.
ಇನ್ನು ಮತ್ತೊಂದೆಡೆ ಈ ರೀತಿಯ ನಿರ್ಣಯಗಳು ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ. ಸಂವಿಧಾನದ ಪ್ರಕಾರ ಪ್ರತಿಯೊಂದು ಧರ್ಮಕ್ಕೂ ತನ್ನ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಹಕ್ಕಿದೆ ಎಂದು ಜೆಡಿಯುನ ನೀರಜ್ ಕುಮಾರ್ ಹೇಳಿದ್ದಾರೆ.