Breaking:

ಪುಲ್ ಟೈಟ್ ಆಗಿ ತರಗತಿಯಲ್ಲಿ‌ ನಿದ್ರೆ ಮಾಡಿದ ಶಿಕ್ಷಕ; ಮಕ್ಕಳು ಕಂಗಾಲು, ವಿಡಿಯೋ ವೀಕ್ಷಿಸಿ.

ಶಿಕ್ಷಕರೊಬ್ಬರು ಫುಲ್ ಟೈಟಾಗಿ ತರಗತಿಗೆ ಬಂದು ನಿದ್ದೆಗೆ ಜಾರಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಸ್ಸಾಂನ ಕಾಮಾಖ್ಯ ನಗರದ ಶಾಲೆಯಲ್ಲಿ ಘಟನೆ ನಡೆದಿದೆ.
ಶಾಲೆಗೆ ಕುಡಿದು ಬಂದಿದ್ದ ಶಿಕ್ಷಕ ಕುರ್ಚಿಯ ಮೇಲೆ ಆರಾಮವಾಗಿ ನಿದ್ರಿಸಿದ್ದಾನೆ. ಆತನನ್ನು ಎಬ್ಬಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎಷ್ಟೇ ಪ್ರಯತ್ನಿಸಿದರೂ ಅವರು ಎಚ್ಚೆತ್ತುಕೊಳ್ಳಲಿಲ್ಲ. ವಿದ್ಯಾರ್ಥಿಗಳು ಅವನ ಸುತ್ತಲೂ ನೆರೆದು ಕೂಗಿ, ತಳ್ಳಾಡಿ ಎಬ್ಬಿಸಲು ಪ್ರಯತ್ನಿಸಿದ್ದಾರೆ.

ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಶಿಕ್ಷಣದ ಸ್ಥಿತಿ ಈಗಾಗಲೇ ಕಳಪೆಯಾಗಿದೆ. ಶಿಕ್ಷಕರ ಇಂತಹ ಬೇಜವಾಬ್ದಾರಿ ವರ್ತನೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಹೇಳಿದ್ದಾರೆ.

Share this article

ಟಾಪ್ ನ್ಯೂಸ್