ವಿಟ್ಲ; ಆಟೋ ರಿಕ್ಷಾ ಚಾಲಕನಿಗೆ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೋರ್ವ ಚೂರಿಯಿಂದು ಇರಿದು ಗಾಯಗೊಳಿಸಿದ ಘಟನೆ ಉರಿಮಜಲು ಜಂಕ್ಷನ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಎಂಎಂಎಸ್ ಆಟೋ ಚಾಲಕ ಶರೀಫ್ ಗಾಯಗೊಂಡವರು. ಕಾರ್ಯಡಿ ನಿವಾಸಿ ಆಪೀ ಚೂರಿ ಇರಿತದ ಆರೋಪಿಯಾಗಿದ್ದಾನೆ.
ಇಡ್ಕಿದು ಪಂಚಾಯತ್ ಎದುರಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡಿರುವ ಶರೀಫ್ ನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.