ಕೇರಳದ ವಯನಾಡಿನಲ್ಲಿನ ಭೂಕುಸಿತದ ಸಂತ್ರಸ್ತರಿಗೆ ಮಂಗಳೂರಿನ ಬಿ ಹ್ಯೂಮನ್ ಮತ್ತು ಹೋಪ್ ಫೌಂಡೇಶನ್ ಸಂಸ್ಥೆಗಳು ಸಂಗ್ರಹಿಸಿದ ನೆರವು ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗಿದೆ.
ಆಹಾರ, ಔಷಧಿ, ಬಟ್ಟೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಎರಡು ಟ್ರಕ್‌ಗಳಲ್ಲಿ ಮಂಗಳೂರಿನಿಂದ ಸೋಮವಾರ ಕಳುಹಿಸಿಕೊಡಲಾಗಿದೆ. ಟ್ರಕ್‌ಗಳಿಗೆ ತೆರಳಲು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಸಿರು ನಿಶಾನೆ ತೋರಿದ್ದಾರೆ.
ಈ ವೇಳೆ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಂಕಷ್ಟದಲ್ಲಿರುವ ವಯನಾಡ್ ಜನತೆಗೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ತಲುಪಿಸುವ ಕಾರ್ಯ ಕೈಗೊಂಡಿರುವ ಬಿ ಹ್ಯೂಮನ್ ಮತ್ತು ಹೋಪ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮಂಗಳೂರಿನಿಂದ ಇನ್ನು ಯಾರಾದರೂ ಪರಿಹಾರ ಸಾಮಗ್ರಿಗಳನ್ನು ಕೊಡುವುದಿದ್ದರೆ ಜಿಲ್ಲಾಡಳಿತ ಅವರಿಗೆ ಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.