Breaking:

ಮೌಲಾನ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಜನ

ಬಾಗಲಕೋಟೆ : ತರಕಾರಿ ಮಾರುಕಟ್ಟೆಯಲ್ಲಿ ನಡೆದ ಸಣ್ಣ‌ ಜಗಳ, ವಿಕೋಪಕ್ಕೆ ತಿರುಗಿ ಮೌಲಾನಾ ಮೇಲೆ‌ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೌಲಾನಾ ಮೇಲೆ‌ ಕಾರ್ತಿಕ‌ ಮತ್ತು ಪ್ರೀತಮ್, ನಾಗರಾಜ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ,‌ ಮುಸ್ಲಿಂ ಸಮುದಾಯದ ಪ್ರಮುಖರು, ರಾತ್ರಿ ನವನಗರ‌ ಪೊಲೀಸ್ ಠಾಣೆ ಎದುರು ಜಮಾಯಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಮುಸ್ಲಿಂ‌ ಮುಖಂಡರನ್ನು ಪೊಲೀಸರು ಸಮಾಧಾನಪಡಿಸಿದ್ದು, ಆರೋಪಿಗಳಾದ ಕಾರ್ತಿಕ‌ ಮತ್ತು ಪ್ರೀತಮ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗರಾಜ ಎಂಬಾತ ಓಡಿ ಹೋಗಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಈ ಘಟನೆಯಿಂದ‌ ನವನಗರ‌ ಪೊಲೀಸ್ ಠಾಣೆ ಎದುರು‌ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Share this article

ಟಾಪ್ ನ್ಯೂಸ್