Breaking:

ಬಾಗಲಕೋಟೆಯಲ್ಲಿ ಅಪರೂಪದ ಮಗು ಜನನ

ಬಾಗಲಕೋಟೆ; ನವಜಾತ ಶಿಶುವೊಂದು 12 ಕಾಲ್ಬೆರಳುಗಳು ಮತ್ತು 13 ಬೆರಳುಗಳೊಂದಿಗೆ ಜನಿಸಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಸನ್‌ಶೈನ್ ಮಲ್ಪಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಈ ನವಜಾತ ಶಿಶು ಜನಿಸಿದೆ.

ಮಗುವಿನ ಬಲಗೈನಲ್ಲಿ 6, ಎಡಗೈನಲ್ಲಿ 7 ಮತ್ತು ಪ್ರತಿ ಕಾಲಿನಲ್ಲಿ 6 ಬೆರಳುಗಳು ಕಂಡು ಬಂದಿದೆ.ಅಪರೂಪದ ಸ್ಥಿತಿಯನ್ನು ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ.

ಭಾರತಿ ಮತ್ತು  ಗುರಪ್ಪ ಕೊಣ್ಣೂರ ದಂಪತಿಗೆ ಈ ಅಪರೂಪದ ಮಗು ಜನಿಸಿದ್ದು, ಇದರಿಂದ ಕುಟುಂಬವು ಸಂತೋಷವಾಗಿದೆ.

ನನ್ನ ಪತ್ನಿ ಪ್ರತಿ ವಾರ ಕುಂದರಗಿಯ ಭುವನೇಶ್ವರಿ ದೇವಿಗೆ ತೆರಳಿ ಮಕ್ಕಳಾಗುವಂತೆ ಬೇಡಿಕೊಂಡಿದ್ದಳು. ಬೇಡಿಕೆಯ 4ನೇ ವಾರದಲ್ಲಿಯೇ ಗರ್ಭಿಣಿಯಾಗಿದ್ದಾಳೆ ಎಂದು ಗುರಪ್ಪ ಹೇಳಿಕೊಂಡಿದ್ದಾರೆ.

Share this article

ಟಾಪ್ ನ್ಯೂಸ್