ಬಜ್ಪೆ: ಅಕ್ರಮವಾಗಿ ಗೋವಿನ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತರನ್ನು ಮೂಡುಬಿದ್ರೆಯ ಹಂಡೇಲು ನಿವಾಸಿಗಳಾದ ಆರೀಫ್ (24) ಹಾಗೂ ಸುಲ್ತಾನ್ (19) ಎಂದು ಗುರುತಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಬಂಧಿತರಿಂದ ದನದ ಮಾಂಸ ಹಾಗು ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಜ್ಪೆ ಪೊಲೀಸ್ ಠಾಣೆಯ ಪಿ.ಎಸ್.ಐ ರೇವಣಸಿದ್ದಪ್ಪ ಅವರು ಸಿಬ್ಬಂದಿಯೊಂದಿಗೆ ಬಡಗ ಎಡಪದವು ಗ್ರಾಮದ ಬೈತಾರಿ ಎಂಬಲ್ಲಿ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಿ.ಎಸ್.ಐ ರೇವಣಸಿದ್ದಪ್ಪ, ಪಿ.ಎಸ್.ಐ ಕುಮಾರೇಶನ್, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ರಶೀದ ಶೇಖ್, ಸುಜನ್, ದೇವಪ್ಪ ಹೊಸಮನಿ, ದುರ್ಗಾಪ್ರಸಾದ, ಜಗದೀಶ್, ಬಸವರಾಜ್ ಪಾಟೀಲ್, ಪ್ರೇಮ್ ಕುಮಾರ್, ಭಿಮಪ್ಪ, ಭರಮಾ ಬಡಿಗೇರ್, ಪ್ರಕಾಶ್, ಚಂದ್ರಕಾಂತ್, ಚಿದಾನಂದ, ವಿರುಪಾಕ್ಷ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.