Breaking:

ದಟ್ಟ ಕಾಡಿನೊಳಗೆ ಆಧುನಿಕ ಟೆಕ್ನಾಲಜಿ ಬಳಸಿ ನಿಧಿಗಾಗಿ ಶೋಧ ನಡೆಸುತ್ತಿದ್ದ ನಿಧಿಗಳ್ಳರ ಬಂಧನ

ಆಧುನಿಕ ಟೆಕ್ನಾಲಜಿ ಬಳಸಿ ನಿಧಿ ಶೋಧನೆ ನಡೆಸುತ್ತಿದ್ದ ಆಂಧ್ರದ ನಿಧಿಗಳ್ಳರನ್ನು ಬಳ್ಳಾರಿಯ ಸಂಡೂರು ಅರಣ್ಯ ಪ್ರದೇಶದಲ್ಲಿ  ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಮೂಲದ ಶ್ರೀನಿವಾಸ್(45), ಆಕಾಶ್( 20) , ಶ್ರೀನಿವಾಸ್, ವೆಂಕಟ್ ರಾವ್ ಹಾಗೂ ಗದಗ ಮೂಲದ ಭಗತ್ ಸಿಂಗ್ ದೊಡ್ಡಮನಿ(50) ಬಂಧಿತ ಆರೋಪಿಗಳು.

ಇವರು ದಟ್ಟ ಕಾಡಿನ ಮಧ್ಯದಲ್ಲಿರುವ ಗುಹೆಗಳಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಇವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿ ಮಲೈ ಅರಣ್ಯ ವ್ಯಾಪ್ತಿಯಲ್ಲಿ ಚಿನ್ನ, ವಜ್ರಕ್ಕಾಗಿ ಹುಡುಕಾಡಿದ್ದಾರೆ. ಗುಹೆಯೊಳಗಡೆ ಸುರಂಗವನ್ನು ಕೂಡ ಕೊರೆಯಲು ಆಕ್ಸಿಜನ್ ಸೇರಿದಂತೆ ವ್ಯವಸ್ಥೆಯನ್ನು ಮಾಡಿದ್ದರು. ಜನರೇಟರ್, ಡಿಗ್ಗಿಗ್ ಮಷೀನ್ ಸೇರಿದಂತೆ ಅತ್ಯಾಧುನಿಕ ಸಾಧನಗಳನ್ನು ಬಳಸಿದ್ದಾರೆ.

ಒಟ್ಟು 11 ಜನರ ತಂಡವು ತಾರಾನಗರದ ನಾರಿಹಳ್ಳದ ಹಿಂಭಾದ ಅರಣ್ಯ ಗುಡ್ಡದಲ್ಲಿ ನಿಧಿಗಾಗಿ ಶೋಧ ನಡೆಸಿದ್ದಾರೆ.

Share this article

ಟಾಪ್ ನ್ಯೂಸ್