ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೂರಾರು ಮಂದಿ ಬಾಂಗ್ಲಾದೇಶಿಯರು ಮೃತಪಟ್ಟಿದ್ದಾರೆ. ಹಿಂಸಾಚಾರ ವ್ಯಾಪಕವಾಗುತ್ತಿದ್ದಂತೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತಕ್ಕೆ ಬಂದಿಳಿದಿದ್ದಾರೆ.
ಈ ಮಧ್ಯೆ ವಿದ್ಯಾರ್ಥಿಗಳು ಬಾಂಗ್ಲಾದೇಶದ ಪ್ರಧಾನಿಯ ಮನೆಗೆ ನುಗ್ಗಿದ್ದು, ಪ್ರಧಾನಿ ಮಲಗುತ್ತಿದ್ದ ಮಂಚದ ಮೇಲೆ ಮಲಗಿ ದುಸ್ಸಾಹಾಸ ಮೆರೆದಿದ್ದಾನೆ. ವಿದ್ಯಾರ್ಥಿಗಳು ಪ್ರಧಾನಿ ಮನೆಯ ಒಳಗಡೆ ನುಗ್ಗಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಸರ್ಕಾರಿ ಉದ್ಯೋಗಕ್ಕೆ ಮೀಸಲಾತಿ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ತಾರಕಕ್ಕೇರಿದ್ದು, ಪ್ರತಿಭಟನಾಕಾರರು ನುಗ್ಗುವ ಮುನ್ನವೇ ಅಪಾಯದ ಮುನ್ಸೂಚನೆ ಪಡೆದ ಶೇಖ್ ಹಸೀನಾ ಸೇನಾ ವಿಮಾನದಲ್ಲಿ ದೇಶ ತೊರೆದಿದ್ದಾರೆ.
ಹಸೀನಾ ಅವರ ನಿವಾಸಕ್ಕೆ ಮುತ್ತಿಗೆ ಹಾಕಿರುವ ನೂರಾರು ಪ್ರತಿಭಟನಾಕಾರರು ಪೀಠೋಪಕರಣ ಸೇರಿದಂತೆ ಎಲ್ಲಾ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ, ಗೇಟ್‌ಗಳನ್ನು ಮುರಿದಿದ್ದಾರೆ. ನಿವಾಸದಲ್ಲಿದ್ದ ದುಬಾರಿ ವಸ್ತುಗಳನ್ನು ದೋಚಿದ್ದಾರೆ. ಪೀಠೋಪಕರಣಗಳ ಮೇಲೆ ಕುಳಿತು ದಾಂಧಲೆ ನಡೆಸಿದ್ದಾರೆ. ಹಸೀನಾ ಅವರ ತಂದೆ ಮತ್ತು ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಕೂಡಾ ಗುಂಪು ಧ್ವಂಸಗೊಳಿಸಿದೆ. ಈ ಎಲ್ಲಾ ಘಟನೆಗಳು ಕಳೆದೆರಡು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ನಡೆದಿದ್ದ ಬಿಕ್ಕಟ್ಟಿನ ಘಟನೆಯನ್ನು ನೆನಪಿಸಿದೆ.
Storming of the residence of Bangladesh PM Hasina in Dhaka pic.twitter.com/5lXHOPQZbX
— Sidhant Sibal (@sidhant) August 5, 2024