Breaking:

ಅಂತಿಮ ದರ್ಶನಕ್ಕೆ ಬಂದು ಜಗಳ; ಓರ್ವನ ಕೊಲೆಯಲ್ಲಿ ಅಂತ್ಯ

ಬೆಂಗಳೂರು:ಸಾವಿನ ಮನೆಗೆ ಬಂದು ವ್ಯಕ್ತಿಯೋರ್ವ ಸ್ನೇಹಿತನಿಂದಲೇ ಕೊಲೆಯಾದ ಹೃದಯ ವಿದ್ರಾಹಕ ಘಟನೆ ಬೆಂಗಳೂರಿನ ಕಾಟನ್ ​ಪೇಟೆಯ ಅಂಜನಪ್ಪ ಗಾರ್ಡನ್​ನಲ್ಲಿ ನಡೆದಿದೆ.

ಸ್ನೇಹಿತ ಶರತ್​ಗೆ ಚಾಕು ಇರಿದು ಆಟೋ ಚಾಲಕ ಶರತ್ ಎಂಬಾತ ಕೊಲೆ ಮಾಡಿದ್ದಾನೆ.

ಅಂಜನಪ್ಪ ಗಾರ್ಡನ್​​ನಲ್ಲಿ ಒಂದು ಸಾವಾಗಿರುತ್ತದೆ. ಹೀಗಾಗಿ ಅವರ ಅಂತಿಮ‌ ದರ್ಶನ ಪಡೆಯಲು ಈ ಇಬ್ಬರು ಆಗಮಿಸಿದ್ದರು. ಅಲ್ಲಿ ಶರತ್ ಓರ್ವ ಮಹಿಳೆಗೆ ಬೈದಿದ್ದನೆನ್ನಲಾಗಿದೆ.ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.

ಬಳಿಕ ವಾಪಸ್​ ಮನೆಗೆ ತೆರಳುವ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಇದರಿಂದ ರೊಚ್ಚಿಗೆದ್ದ ಚಾಲಕ ಶರತ್, ತನ್ನ ಸ್ನೇಹಿತ ಮತ್ತೋರ್ವ​ ಶರತ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಈ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ‌ ಪ್ರಕರಣ ದಾಖಲಾಗಿದೆ.

Share this article

ಟಾಪ್ ನ್ಯೂಸ್