Breaking:

ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿದ ದುಷ್ಕರ್ಮಿ; ಮಹಿಳೆಯ ಸ್ಥಿತಿ ಗಂಭೀರ, ಆರೋಪಿಗೆ ಧರ್ಮದೇಟು

ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿರುವ ಆಘಾತಕಾರಿ ಘಟನೆ ಕೊಡಿಗೇಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸಹಕಾರ ನಗರದಲ್ಲಿ  ನಡೆದಿದೆ.

ಸಹಕಾರ ನಗರದಲ್ಲಿ ಸುನಿತಾ (38) ಎಂಬ ಮಹಿಳೆ ಗುರುವಾರ ಸಂಜೆ ನಡೆದುಕೊಂಡು ಹೋಗುವಾಗ ದುಷ್ಕರ್ಮಿಯೋರ್ವ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಬಳಿಕ ಕಲ್ಲಿನಿಂದ ಅವರ ತಲೆಯನ್ನು ಜಜ್ಜಿದ್ದಾನೆ. ಇದರಿಂದಾಗಿ ಮಹಿಳೆಯು ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ದುಷ್ಕರ್ಮಿಗೆ ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

 

 

 

 

Share this article

ಟಾಪ್ ನ್ಯೂಸ್