Breaking:

ಬಂಟ್ವಾಳ; ಮನೆಯೊಳಗೆ ಜುಗಾರಿ ಅಡ್ಡೆ; ಪೊಲೀಸ್ ದಾಳಿ, ಹಲವರು ವಶಕ್ಕೆ

ಬಂಟ್ವಾಳ:  ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ಆಟಕ್ಕೆ ಬಳಸಿದ ಹಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಿಲಿಮೊಗ್ರು ಗ್ರಾಮದ ನಡಾಯಿ ಎಂಬಲ್ಲಿ ನಡ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಶಿವರಾಮ ನಾಯಕ್ (56), ಗೋಪಾಲ (41), ಯೋಗೀಶ ಪ್ರಭು, (46) ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಯಚಂದ್ರ ಬೊಳ್ಳಾರ್ ಎಂಬಾತನ ಒಡೆತನದ ಪಿಲಿಮೊಗರು ಗ್ರಾಮದ ನಡಾಯಿ ಎಂಬಲ್ಲಿರುವ ಮನೆಯೊಳಗೆ ಇಸ್ಪೀಟ್ ಎಲೆಗಳನ್ನು ಬಳಸಿ ಆಟವಾಡುವಾಗ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ‌.

ದಾಳಿ ವೇಳೆ  28,120 ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Share this article

ಟಾಪ್ ನ್ಯೂಸ್