ಬಂಟ್ವಾಳ: ಮಹಿಳೆಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಶಂಭೂರು ಗ್ರಾಮದಲ್ಲಿರುವ ಎಎಂಆರ್ ಪವರ್ ಡ್ಯಾಮಿನ 6 ನೇ ಗೇಟ್ ಬಳಿ ಸಿಕ್ಕಿದೆ.
ಮಹಿಳೆಗೆ ಸುಮಾರು 40-50 ವರ್ಷ ಪ್ರಾಯ ಆಗಿರಬಹುದೆಂದು ಅಂದಾಜಿಸಲಾಗಿದ್ದು, 15 ದಿನಗಳ ಹಿಂದೆ ಈ ಅಪರಿಚಿತ ಮಹಿಳೆ ನೇತ್ರಾವತಿ ನದಿಗೆ ಆಕಸ್ಮಿಕವಾಗಿ ಬಿದ್ದು ಅಥವಾ ನದಿಗೆ ಹಾರಿರುವ ಶಂಕೆ ಇದೆ.
ಮೃತದೇಹ ನದಿ ನೀರಿನಲ್ಲಿ ತೇಲಿಕೊಂಡು ಬಂದು ಶಂಭೂರು ಡ್ಯಾಮಿನಲ್ಲಿ ಸಿಕ್ಕಿ ಹಾಕಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.