Breaking:

ಬಸ್ & ಆಟೋ ನಡುವೆ ಅಪಘಾತ; ತಾಯಿ & ಇಬ್ಬರು ಮಕ್ಕಳು ದುರ್ಮರಣ

ಬಸ್ ಮತ್ತು ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ  ತಾಯಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ನ ಅತಿವಾಳ ಕ್ರಾಸ್ ಬಳಿ ನಡೆದಿದೆ.

ಬೀದರ್‌ನ ಹೊನ್ನಕೇರಿ ತಾಂಡಾ ನಿವಾಸಿಗಳಾದ ಅನಿತಾ ಬಾಯಿ(45) ಮತ್ತು ಅವರ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿತರ ಮೂವರು ಗಾಯಗೊಂಡಿದ್ದಾರೆ.

ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Share this article

ಟಾಪ್ ನ್ಯೂಸ್