ಬೆಳ್ತಂಗಡಿಯ ಬೆಳಾಲು ಗ್ರಾಮದ ಎಸ್.ಪಿ.ಬಿ. ಕೌಂಪೌಂಡ್ ನಿವಾಸಿ ನಿವೃತ್ತ ಶಾಲಾ ಮುಖ್ಯೋ ಪಾಧ್ಯಾಯ ಎಸ್.ಪಿ. ಬಾಲಕೃಷ್ಣ ಬಡೆಕ್ಕಿಲ್ಲಾಯ ಕೊಲೆ ಪ್ರಕರಣ ಪೊಲೀಸರಿಗೆ ತಲೆನೋವಾಗಿದ್ದು, ಈವರೆಗೆ ಆರೋಪಿಗಳ ಬಂಧನ ನಡೆದಿಲ್ಲ.
ಬಾಲಕೃಷ್ಣ ಅವರು ಮನೆಯಲ್ಲಿ ಒಬ್ಬರೇ ಇದ್ದು, ಕೃತ್ಯ ನಡೆಸಿದ ಬಳಿಕ ಮನೆಯಿಂದ ಯಾವುದೇ ಸೊತ್ತುಗಳು ಕಳ್ಳತನ ನಡೆದಿಲ್ಲ. ಮೃತರ ಕೈಯಲ್ಲಿದ್ದ ಚಿನ್ನದ ಉಂಗುರ ಹಾಗೆಯೇ ಇದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಇದರಿಂದ ದರೋಡೆ ಉದ್ದೇಶದಿಂದ ಕೊಲೆ ನಡೆದಿಲ್ಲ ಎಂದು ಅಂದಾಜಿಸಲಾಗಿದೆ.
ಯಾವುದೋ ಮಾರಾಕಾಸ್ತ್ರದಿಂದ ಕೊಲೆ ನಡೆಸಲಾಗಿದ್ದು, ಯಾವ ಉದ್ದೇಶದಿಂದ ಕೊಲೆ ನಡೆದಿದೆ ಎಂಬುದು ತನಿಖೆಯಿಂದಷ್ಟೆ ತಿಳಿದುಬರಬೇಕಿದೆ.
ಮೇಲ್ನೋಟಕ್ಕೆ ದ್ವೇಷದಿಂದ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಧರ್ಮಸ್ಥಳ ಸಹಿತ ಬೆಳ್ತಂಗಡಿ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.