Breaking:

ಬೆಳ್ತಂಗಡಿ; ಬೈಕ್ ಗೆ ಬೊಲೆರೋ ಢಿಕ್ಕಿ; ಬಾಲಕಿ ಮೃತ್ಯು

ಬೆಳ್ತಂಗಡಿ:  ಬೊಲೆರೊ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ನಡೆದಿದೆ.

ಕಲ್ಮಂಜ ಗ್ರಾಮದ ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಗಾನವಿ ಪುತ್ರಿಯಾದ ಅನರ್ಘ್ಯ ಮೃತ ಬಾಲಕಿ.

ಅನರ್ಘ್ಯ ಉಜಿರೆ ಎಸ್‌ಡಿಎಂ ಶಾಲೆಯಲ ಆರನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಬೈಕ್​ನಲ್ಲಿ ತೆರಳುತ್ತಿದ್ದಾಗ ಡಿಕ್ಕಿ ಹೊಡೆದ ಬೊಲೆರೊ 30 ಮೀಟರ್ ಎಳೆದುಕೊಂಡು ಹೋಗಿದೆ. ಪರಿಣಾಮ ಸ್ಥಳದಲ್ಲೇ ಅನರ್ಘ್ಯ ಕೊನೆಯುಸಿರೆಳೆದಿದ್ದಾಳೆ. ಅಪಘಾತ ಬಳಿಕ ವಾಹನದ ಸಮೇತ ಪರಾರಿಯಾಗುತ್ತಿದ್ದವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Share this article

ಟಾಪ್ ನ್ಯೂಸ್