Breaking:

ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ ಮಕ್ಕಳು; ಬಾಂಬ್ ಸ್ಪೋಟಗೊಂಡು ಐವರಿಗೆ ಗಾಯ

ಯೂಟ್ಯೂಬ್​ ನೋಡಿ ಬಾಂಬ್​​ ತಯಾರಿಸಲು ಪ್ರಯತ್ನಿಸುತ್ತಿದ್ದಾಗ ಸ್ಫೋಟಗೊಂಡು ಐವರು ಮಕ್ಕಳು ಗಾಯಗೊಂಡಿರುವ ಘಟನೆ ಮುಜಾಫರ್​​ಪುರದಲ್ಲಿ ನಡೆದಿದೆ.

ಲವ್ ಕುಮಾರ್ (8), ಕುಶ್ ಕುಮಾರ್(5), ಜೈದೀಪ್ ಕುಮಾರ್, ಅಭಿಯಾಂಶು ಕುಮಾರ್ ಮತ್ತು ಗುಡ್ಡು ಕುಮಾರ್ ಗಾಯಾಳುಗಳು ಎಂದು ಗುರುತಿಸಲಾಗಿದೆ.

ಗೈಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬೋರಿಡಿಹ್ ಪಂಚಾಯತ್‌ನ ಮುನ್ನಿ ಕಲ್ಯಾಣ ಗ್ರಾಮದಲ್ಲಿ ಕೆಲವು ಮಕ್ಕಳು ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡಿ ಬಾಂಬ್ ತಯಾರಿಸಲು ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಐವರು ಮಕ್ಕಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳ ಕೈ, ಕಾಲು, ಮುಖ ಸುಟ್ಟು ಕರಕಲಾಗಿದೆ. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಡಿಎಸ್ಪಿ ಪೂಜಾ ಕುಮಾರಿ ಅವರ ತಂಡ ತೆರಳಿ ಪರಿಶೀಲನೆ ನಡೆಸಿದೆ.

Share this article

ಟಾಪ್ ನ್ಯೂಸ್