Breaking:

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಬಿಜೆಪಿಯ ಮಾಜಿ ಶಾಸಕನಿಗೆ ಕ್ಷಮಾಧಾನ ನೀಡಿದ ರಾಜ್ಯಪಾಲೆ

ಸಮಾಜವಾದಿ ಪಕ್ಷದ ಶಾಸಕ ಜವಾಹರ್‌ ಯಾದವ್‌ ಅವರ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದ ಬಿಜೆಪಿಯ ಮಾಜಿ ಶಾಸಕ ಉದಯಭನ್‌ ಕರ್ವಾರಿಯಾಗೆ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಕ್ಷಮಾಧಾನ ನೀಡಿ ಬಿಡುಗಡೆಗೊಳಿಸಿದ್ದಾರೆ.

ಸಂವಿಧಾನದ ವಿಧಿ 161 ಅನ್ವಯ ಇರುವ ಅಧಿಕಾರಗಳನ್ನು ಬಳಸಿಕೊಂಡು ರಾಜ್ಯಪಾಲೆ ಆನಂದಿಬೆನ್, ಕರ್ವಾರಿಯಾ ಅವರ ಬಿಡುಗಡೆಗೆ ಆದೇಶಿಸಿದ್ದರು.

ಜೈಲಿನಲ್ಲಿರುವಾಗ ಸನ್ನಡತೆಯ ಕಾರಣ ನೀಡಿ ಕರ್ವಾರಿಯಾ ಅವರ ಬಿಡುಗಡೆಗೆ ಈ ಹಿಂದೆ ಪ್ರಯಾಗರಾಜ್‌ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಶಿಫಾರಸು ಮಾಡಿದ್ದರು.

ಪ್ರಯಾಗರಾಜ್‌ನಲ್ಲಿ ಆಗಸ್ಟ್‌ 1996ರಲ್ಲಿ ಜವಾಹರ್‌ ಯಾದವ್‌ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಕರ್ವಾರಿಯಾ ಅವರಿಗೆ ನವೆಂಬರ್‌ 4, 2019ರಲ್ಲಿ ಜೀವಾವಧಿ ಶಿಕ್ಷೆ  ವಿಧಿಸಲಾಗಿತ್ತು.

Share this article

ಟಾಪ್ ನ್ಯೂಸ್