Breaking:

ಬಂಟ್ವಾಳ: ಈದ್ ಮಿಲಾದ್ ಹಬ್ಬದ ಹಿನ್ನೆಲೆ ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು; ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಿಯಲ್ಲಿ ‌ಸೆ.16 ರಂದು ನಡೆದಿದೆ. ಮಂಚಿ ಗ್ರಾಮದ ಮೋಂತಿಮಾರು ನಿವಾಸಿ ಆಸ್ಮ ಎಂಬವರ ಮನೆಯಿಂದ ಕಳವು ನಡೆದಿದೆ. ‌ಸೆ.16ರ ಸೋಮವಾರ ಬೆಳಿಗ್ಗೆ ಈದ್ ಮಿಲಾದ್ ‌ಹಬ್ಬದ ಪ್ರಯುಕ್ತ ಮಕ್ಕಳ ಕಾರ್ಯಕ್ರಮ ನೋಡಲು ಮನೆಗೆ ಬೀಗ ಹಾಕಿ ಮಸೀದಿಗೆ ತೆರಳಿದ್ದ ವೇಳೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ರಾತ್ರಿ […]

ಉಡುಪಿ; ಸಂಬಂಧಿ ಮಹಿಳೆಯ ಪ್ರಾಣ ರಕ್ಷಿಸಿ ಜೀವ ಕಳೆದುಕೊಂಡ ಉಪನ್ಯಾಸಕಿ

ಉಪನ್ಯಾಸಕಿಯೊಬ್ಬರು ಸಂಬಂಧಿಯೊಬ್ಬರ ಜೀವ ಉಳಿಸಿಲು ಹೋಗಿ ತಮ್ಮದೇ ಪ್ರಾಣ ಕಳೆದಕೊಂಡ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ನಡೆದಿದೆ‌. ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ಉಪನ್ಯಾಸಕಿಯಾಗಿ ಕೆಲ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಅರ್ಚನಾ ಕಾಮತ್‌(34) ಜೀವ ಕಳೆದುಕೊಂಡವರು. ಮೃತರು ಪತಿ ಚಾರ್ಟರ್ಡ್‌ ಅಕೌಂಟೆಂಟ್‌ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ 69 ವರ್ಷದ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಅರ್ಚನಾ ಬಯಸಿದ್ದರು. ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ […]

ಕಾಟಿಪಳ್ಳ ಮಸೀದಿಗೆ ಕಲ್ಲೆಸೆತ ಪ್ರಕರಣ; ಐವರು ಆರೋಪಿಗಳ ಬಂಧನ

ಸುರತ್ಕಲ್: ಕಾಟಿಪಳ್ಳ 3ನೇ ಬ್ಲಾಕ್ ನ ಮಸ್ಜಿದುಲ್ ಹುದಾ ಜುಮಾ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್, ಕಟ್ಲ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ, ಹಳೆಯಂಗಡಿ ಚೇಳಾಯರು ಖಂಡಿಗೆ ಪಾಡಿ ನಿವಾಸಿ ನಿತಿನ್, ಈಶ್ವರ ನಗರ ನಿವಾಸಿ ಮನು ಮತ್ತು ಮುಂಚೂರು ನಿವಾಸಿ ಸುಜಿತ್ ಎಂಬವರು ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಬೈಕಿನಲ್ಲಿ ಬಂದ ಆರೋಪಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದರು.

ಬರೊಬ್ಬರಿ 50ಕ್ಕೂ ಅಧಿಕ ಪ್ರಕರಣಗಳ ಆರೋಪಿ ಕುಖ್ಯಾತ ರೌಡಿ ಶೀಟರ್ ಅರೆಸ್ಟ್

ಬೆಂಗಳೂರು: ಕುಖ್ಯಾತ ರೌಡಿಶೀಟರ್ ಬ್ಯಾಟರಿ ಜಯಂತ್ ನನ್ನು ಪೊಲೀಸರು ಬಂಧಿಸಿದ್ದು, 3 ಬೈಕ್ ಗಳು, ಸೇರಿ ಮೊಬೈಲ್ ಜಪ್ತಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸರು ಕುಖ್ಯಾತ ರೌಡಿಶೀಟರ್ ಬ್ಯಾಟರಿ ಜಯಂತ್ ನನ್ನು  ಬಂಧಿಸಿದ್ದಾರೆ ಬ್ಯಾಟರಿ ಜಯಂತ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸೇರಿ ಬರೋಬ್ಬರಿ 56 ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಯಂತ್ ವಿರುದ್ಧ ಕೊಲೆ, ಕೊಲೆ ಯತ್ನ, ಕಳ್ಳತನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿವೆ. ಸದ್ಯ ಜಾಮೀನಿನ […]

ಬಿಜೆಪಿ ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ!

ಕೋಲಾರ: ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೋಲಾರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಎರಡು FIR ದಾಖಲು ಮಾಡಲಾಗಿದೆ. ಒಂದು ಗುತ್ತಿಗೆದಾರ ಚೆಲುವರಾಜ್‌ಗೆ ಜೀವ ಬೆದರಿಕೆ ಹಾಕಿರುವುದು ಮತ್ತು ಇನ್ನೊಂದು ಜಾತಿ ನಿಂದನೆ ಅಡಿಯಲ್ಲಿ ದೂರನ್ನು ಬೆಂಗಳೂರಿನ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿರುವ ಚೆಲುವರಾಜು, ಶಾಸಕ ಮುನಿರತ್ನ ವಿರುದ್ಧ […]

ಸೀತಾರಂ ಯೆಚೂರಿ ಪಾರ್ಥೀವ ಶರೀರ ಏಮ್ಸ್ ಆಸ್ಪತ್ರೆಗೆ ದಾನ

ಸಿಪಿಐಎಂ ಹಿರಿಯ ನಾಯಕ ಸೀತಾರಾಂ ಯಚೂರಿ ಕುಟುಂಬಸ್ಥರು ಅವರ ಪಾರ್ಥೀವ ಶರೀರವನ್ನು ಸಂಶೋಧನೆಗಾಗಿ ನವದೆಹಲಿಯ ಏಮ್ಸ್‌ ಮೆಡಿಕಲ್ ಕೇಂದ್ರಕ್ಕೆ ದಾನ ಮಾಡಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸಿಪಿಐ ಕಾರ್ಯದರ್ಶಿ ಸೀತಾರಾಂ ಯಚೂರಿ (72) ನಿನ್ನೆ ನಿಧನರಾಗಿದ್ದರು. ರಾಜ್ಯದ ಹಲವು ರಾಜಕೀಯ ಗಣ್ಯರು ಯಚೂರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು ಮಧ್ಯಾಹ್ನ ಯಚೂರಿ ಕುಟುಂಬಸ್ಥರು ಯಚೂರಿ ಅವರ ಮೃತದೇಹವನ್ನು ಸಂಶೋಧನೆಗಾಗಿ ನವದೆಹಲಿಯ ಏಮ್ಸ್‌ ಮೆಡಿಕಲ್ ಕೇಂದ್ರಕ್ಕೆ ನೀಡಲಾಗಿದೆ. ಯಚೂರಿ ಅವರ ಮೃತದೇಹ ಉಪಯೋಗವಾಗಲಿ, ಅವರ ನಿಧನದ ಬಳಿಕವೂ ಅವರ […]

ಭಿಕ್ಷಕನ ಬಳಿ 7.5 ಕೋಟಿ ರೂ.; ಈತ ಜಗತ್ತಿನ ಶ್ರೀಮಂತ ಭಿಕ್ಷುಕ!

ಮುಂಬೈನ ಭಿಕ್ಷುಕ ಭರತ್ ಜೈನ್ ಕೋಟಿ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು,7.5 ಕೋಟಿ ರೂ.ಸಂಪತ್ತಿನ ಒಡೆಯನಾಗಿದ್ದಾನೆ. ನಾವು ಸಾಮಾನ್ಯವಾಗಿ ಭಿಕ್ಷುಕರನ್ನು ಅತ್ಯಂತ ಬಡವರು, ದೈನಂದಿನ ಉಳಿವಿಗಾಗಿ ಹೋರಾಡುವವರು ಎಂದು ಗ್ರಹಿಸುತ್ತೇವೆ. ಆದರೆ, ಒಬ್ಬ ಭಿಕ್ಷುಕ ಕೋಟಿಗಟ್ಟಲೆ ಸಂಪತ್ತನ್ನು ಸಂಪಾದಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಪರಿಗಣಿಸಲ್ಪಟ್ಟ ಭರತ್ ಜೈನ್ ಅಸಾಧಾರಣ ವ್ಯಕ್ತಿ. ಮುಂಬೈನ ನಿವಾಸಿಯಾಗಿರುವ ಭರತ್ ಜೈನ್ ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿದ್ದಾರೆ. ಕಾರ್ಪೊರೇಟ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಅನೇಕ ಸುಶಿಕ್ಷಿತ ವೃತ್ತಿಪರರಿಗಿಂತ […]

ಬೈಕ್ ಗೆ ಲಾರಿ ಢಿಕ್ಕಿ: ಮೂವರು ವಿದ್ಯಾರ್ಥಿಗಳು ದುರ್ಮರಣ

ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಯಲಹಂಕ ಸಮೀಪ ನಡೆದಿದೆ. ಜಿಕೆವಿಕೆ ಆವರಣದಲ್ಲಿ ಇರುವ ಬಾಗಲಕೋಟೆಯ ತೋಟಗಾರಿಕೆ ವಿವಿಯ ವಿದ್ಯಾರ್ಥಿಗಳಾದ ರೋಹಿತ್ (21), ಹರ್ಷವರ್ಧನ್ (22) ಹಾಗೂ ಸುಚಿತ್ (22) ಮೃತರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮಂಗಳವಾರ ರಾತ್ರಿ 1 ಗಂಟೆಗೆ ಒಂದೇ ಬೈಕ್‌ನಲ್ಲಿ ಮೂವರು ವಿದ್ಯಾರ್ಥಿಗಳು ಜಾಲಿ ರೈಡ್‌ಗೆ ಹೋಗಿ ಹಾಸ್ಟೆಲ್‌ಗೆ ಮರಳುವಾಗ ಚಿಕ್ಕಜಾಲ ಸಮೀಪದ ಡ್ಯಾಶ್ ಸ್ಯ್ಕಾವರ್ ಮುಂದೆ ಅವಘಡ ಸಂಭವಿಸಿದೆ. ಅಪಘಾತದ ಬಳಿಕ […]

ವಯನಾಡು ಭೂ ಕುಸಿತದಲ್ಲಿ ಕುಟುಂಬದ 9 ಮಂದಿಯನ್ನು ಕಳೆದುಕೊಂಡಿದ್ದ ಯುವತಿಯ ಬಾಳಲ್ಲಿ ಮತ್ತೊಂದು ದುರಂತ

ಕೇರಳದ ವಯನಾಡ್‌ನ ಚೂರಲ್ಮಲದಲ್ಲಿ ಜುಲೈ 30 ರಂದು ನಡೆದ ಭೂಕುಸಿತದಲ್ಲಿ ತನ್ನ ತಂದೆ ತಾಯಿ ಸೋದರಿ ಸೇರಿದಂತೆ ಕುಟುಂಬದ 9 ಮಂದಿಯನ್ನು ಕಳೆದುಕೊಂಡಿದ್ದ ಯುವತಿಗೆ ಮತ್ತೊಂದು ಆಘಾತ ಎದುರಾಗಿದ್ದು, ಭೂಕುಸಿತ ಘಟನೆ ನಡೆದು ಸರಿಸುಮಾರು ಒಂದು ತಿಂಗಳ ಬಳಿಕ ಈಗ ಅವರು ತಮ್ಮ ಭಾವಿ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಾರೆ ವಯನಾಡ್‌ ಭೂಕುಸಿತದಲ್ಲಿ ತನ್ನವರೆಲ್ಲರನ್ನು ಕಳೆದುಕೊಂಡಿದ್ದ ಆಕೆಗೆ ಬದುಕುವ ಭರವಸೆ ನೀಡಿದ್ದು, ಆಕೆಯ ಭಾವಿ ಪತಿ ಹಾಗೂ ಬಾಲ್ಯದ ಗೆಳೆಯ 24 ವರ್ಷದ ಜೀಸನ್ ಅವರು. ಆದರೆ ಈಗ […]

ಮಂಗಳೂರು: ಹಸುವೊಂದಕ್ಕೆ ದಯಾಮರಣ; ಏನಿದು ಅಪರೂಪದ ಸುದ್ದಿ?

ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆಯ ವ್ಯಾಪ್ತಿಗೆ ಸೇರಿರುವ ಕೊಲ್ಯ ಎನ್ನುವ ಪ್ರದೇಶದಲ್ಲಿ ಹಸುವೊಂದಕ್ಕೆ ಬುಧವಾರ ದಯಾಮರಣ ನೀಡಿರುವ ಬಗ್ಗೆ ವರದಿಯಾಗಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹಸು ಸಾರ್ವಜನಿಕರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿತ್ತು. ಅನವಶ್ಯಕವಾಗಿ ಜರನ್ನು ತಿವಿಯಲು ಹೋಗುತ್ತಿತ್ತು. ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ ಹಸುವಿನ ಬಗ್ಗೆ ದೂರುಗಳು ಕೇಳಿಬಂದಿದ್ದವು. ಕಳೆದ ಎರಡು ದಿನಗಳಿಂದಲೂ ಇದೇ ವರ್ತನೆ ತೋರಿಸಿದ್ದ ಹಸುವನ್ನು ಸ್ಥಳೀಯರೇ ಸೇರಿ ಕಟ್ಟಿ ಹಾಕಿದ್ದರು. ಇತ್ತೀಚೆಗೆ ಮಹಿಳೆಯೊಬ್ಬರ ಮೇಲೂ ದಾಳಿ ನಡೆಸಿತ್ತು. ಇನ್ನು ಹಸು […]