ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟ ಜೈ ಶಾ: ಅಮಿತ್ ಶಾ ಪುತ್ರನಿಗೆ ನೀಡುತ್ತಾ 16 ರಾಷ್ಟ್ರಗಳು ಬೆಂಬಲ?
ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೈ ಶಾ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದಕ್ಕೆ 16 ರಾಷ್ಟ್ರಗಳ ಒಪ್ಪಿಗೆ ಬೇಕಾಗಿದೆ. ಜೈಶಾಗೆ ಭಾರತ, ಆಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ , ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ದೇಶಗಳು ಬೆಂಬಲ ನೀಡಬೇಕಾಗಿದೆ. ಈ 16 ರಾಷ್ಟ್ರಗಳು ಕೂಡ ಮತದಾನದ ಅಧಿಕಾರ ಹೊಂದಿವೆ. ಮುಂದಿನ ನವೆಂಬರ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವರ ಅಧಿಕಾರವಧಿ ಮುಕ್ತಾಯವಾಗಲಿದೆ.ಅವರ ಜಾಗಕ್ಕೆ ಅಮಿತ್ ಶಾ […]
ಕ್ರಿಕೆಟರ್ ಮೊಹಮ್ಮದ್ ಸಿರಾಜ್ ಗೆ ನಿವೇಶನ ಮಂಜೂರು ಮಾಡಿದ ತೆಲಂಗಾಣ ಸರಕಾರ
ಹೈದರಾಬಾದ್ : ಬೌಲರ್ ಮುಹಮ್ಮದ್ ಸಿರಾಜ್‌ಗೆ ತೆಲಂಗಾಣ ಸರಕಾರವು ನಿವೇಶನ ಮಂಜೂರು ಮಾಡಿದೆ. ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 78 ರಲ್ಲಿ 600 ಚದರ ಭೂಮಿಯನ್ನು ಮಂಜೂರು ಮಾಡುವ ಆದೇಶವನ್ನು ತೆಲಂಗಾಣ ಸರ್ಕಾರ ನೀಡಿದೆ. ಜುಲೈ 31 ರಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಸಿರಾಜ್ ಅವರಿಗೆ ನಗರದಲ್ಲಿ ಮನೆ ನಿವೇಶನ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಸಿರಾಜ್ ಅವರೊಂದಿಗೆ, ಶೂಟರ್ ಇಶಾ ಸಿಂಗ್ ಮತ್ತು ಎರಡು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖತ್ ಝರೀನ್ ಅವರಿಗೂ […]
ಅನರ್ಹತೆ ಬೆನ್ನಲ್ಲೆ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಪೋಗಟ್: ಭಾವನಾತ್ಮಕ ಟ್ವೀಟ್..
ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದರೂ ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಾಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ತಾನು ಕುಸ್ತಿಗೆ ನಿವೃತ್ತಿ ಹೇಳುತ್ತಿದ್ದೇನೆ ಎಂದು ಫೋಗಾಟ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಈ ಮೊದಲು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಈ ಬಾರಿ ಅವಕಾಶ ಸಿಗದ ಕಾರಣ 50 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಹೀಗಾಗಿ ಸ್ಪರ್ಧೆ ಆರಂಭವಾಗುವ ದಿನ ಬೆಳಿಗ್ಗೆ ನಡೆಸುವ ತೂಕ ಪರಿಶೀಲನೆಯಲ್ಲಿ ಸ್ಪರ್ಧಿ 50 ಅಥವಾ […]
BIG NEWS ಒಲಿಂಪಿಕ್ಸ್ ಪೈನಲ್ ನಿಂದ ಅನರ್ಹಗೊಂಡ ವಿನೇಶ್ ಪೋಗಟ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿರುವ ಬಗ್ಗೆ ವರದಿಯಾಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ ಅವರು 100 ಗ್ರಾಂ ತೂಕ ಹೆಚ್ಚಿರುವುದು ಪತ್ತೆಯಾಗಿತ್ತು. ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಒಲಿಂಪಿಕ್ಸ್ ನಿಯಮದ ಪ್ರಕಾರ ಫೋಗಟ್ ಬೆಳ್ಳಿ ಪದಕಕ್ಕೂ ಅರ್ಹರಾಗುವುದಿಲ್ಲ […]
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಶಾಸಕಿ ಸ್ಪರ್ಧೆ: ಜನಪ್ರತಿನಿಧಿಯಾಗಿದ್ದು, ಪದಕ ಗೆಲ್ಲುವ ನಿರೀಕ್ಷೆಯಲ್ಲಿರುವ ಇವರು ಯಾರು ಗೊತ್ತಾ?
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಬಾರಿ ಭಾರತದಿಂದ 117 ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರಲ್ಲಿ ಓರ್ವ ಶಾಸಕಿ ಕೂಡ ಇರುವುದು ವಿಶೇಷವಾಗಿದೆ. ಶ್ರೇಯಸಿ ಸಿಂಗ್ ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಿಯಾಗಿದ್ದಾರೆ. 32 ವರ್ಷದ ಶ್ರೇಯಸಿ ಸಿಂಗ್, ಮಾಜಿ ಸಚಿವ ದಿವಂಗತ ದಿಗ್ವಿಜಯ್ ಸಿಂಗ್ ಅವರ ಪುತ್ರಿಯಾಗಿದ್ದಾರೆ. ಇವರು ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯಾಡ್‌ನಲ್ಲಿ ಪದಕ ಜಯಿಸಿದ್ದರು. ಮೊದಲು ಒಲಿಂಪಿಕ್ಸ್ ಆಯ್ಕೆಯ ಪಟ್ಟಿಯಲ್ಲಿ ಶ್ರೇಯಸಿ ಅವರ ಹೆಸರಿರಲಿಲ್ಲ. ಟೋಕಿಯೊ ಒಲಿಂಪಿಯನ್ ಮನು ಭಾಕರ್ ಮಹಿಳೆಯರ […]
ಸಾನಿಯಾ ಮಿರ್ಜಾ ಅವರನ್ನು ಕ್ರಿಕೆಟರ್ ಶಮಿ ನಿಜಕ್ಕೂ ವಿವಾಹವಾಗಿದ್ದಾರಾ? ಶಮಿ ಕೊಟ್ಟ ಸ್ಪಷ್ಟನೆ ಏನು?
ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ಬಳಿಕ ಟೀಮ್ ಇಂಡಿಯಾದ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗುತ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಈ ಬಗ್ಗೆ ಕುದ್ದು ಶಮಿ ಸ್ಪಷ್ಟನೆಯನ್ನು ನೀಡಿದ್ದಾರೆ. ಯೂಟ್ಯೂಬ್ ಸಂವಾದವೊಂದರಲ್ಲಿ ಮಾತನಾಡಿದ ಶಮಿ, ಸಾನಿಯಾ ಜತೆಗಿನ ಮದುವೆಯ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಮತ್ತು ಸಾನಿಯಾ ಮದುವೆಯ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇಂತಹ ಗಾಸಿಪ್ ಗಳಿಂದ ಕೆಲವರಿಗೆ ಮನರಂಜನೆ […]