Breaking:

ಕೇಂದ್ರ ಬಜೆಟ್ 2024; ಯಾವುದರ ಬೆಲೆ ಅಗ್ಗ? ಯಾವುದು ದುಬಾರಿ; ಬಜೆಟ್ ಕುರಿತ ಸಂಕ್ಷಿಪ್ತ ಮಾಹಿತಿ…

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಲೋಕಸಭೆಯಲ್ಲಿ 2024-2025ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ. ಬಜೆಟ್ ನಲ್ಲಿ ವಿವಿಧ ಕ್ಷೇತ್ರಗಳಿಗೆ ಅನುದಾನ ನೀಡಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಏನೇನಿದೆ ಎಂಬುವುದರ ಬಗ್ಗೆ

ಯಾವುದು ಅಗ್ಗ:

ಕ್ಯಾನ್ಸರ್‌ ಔಷಧ, ಪೆಟ್ರೋಲ್‌ ದರ 2 ರೂ. ಇಳಿಕೆ, ಮೊಬೈಲ್‌ ಫೋನ್‌, ಆಮದು ಚಿನ್ನ, ಆಮದು ಬೆಳ್ಳಿ, ಚರ್ಮದ ವಸ್ತು, ಸೀ ಫುಡ್‌, ವಿದ್ಯುತ್‌ ತಂತಿ, ಎಕ್ಸರೇ ಮೆಷಿನ್‌, ಸೋಲಾರ್‌ ಪ್ಯಾನಲ್

ಯಾವುದು ದುಬಾರಿ:

ವಿದ್ಯುತ್‌ ಉಪಕರಣ, ಪ್ಲಾಸ್ಟಿಕ್‌, ಬಟ್ಟೆ, ಮೊಬೈಲ್‌ ಟವರ್

ಮೋದಿ ಸರ್ಕಾರವು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಭರ್ಜರಿ ಆರ್ಥಿಕ ಪರಿಹಾರವನ್ನು ಘೋಷಿಸಿದೆ. ಬಿಹಾರದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣವನ್ನು ಸಹ ಘೋಷಿಸಲಾಗಿದೆ. ವೈಶಾಲಿ-ಬೋಧಗಯಾ ಎಕ್ಸ್ಪ್ರೆಸ್ವೇ, ಪಾಟ್ನಾ-ಪೂರ್ಣಿಯಾ ಎಕ್ಸ್ಪ್ರೆಸ್ವೇಗೆ ಹಸಿರು ನಿಶಾನೆ ದೊರೆತಿದೆ. ಕೇಂದ್ರ ಸರ್ಕಾರವು ಗಂಗಾ ನದಿಗೆ ಎರಡು ಹೊಸ ಸೇತುವೆಗಳನ್ನು ನಿರ್ಮಿಸಲಿದೆ.

ಬಿಹಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ 26 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದಲ್ಲದೆ, ಬಿಹಾರದಲ್ಲಿ ಪ್ರವಾಹ ವಿಪತ್ತಿಗೆ 11 ಸಾವಿರ 500 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಸಹ ಘೋಷಿಸಲಾಗಿದೆ. ಪಿರ್ಪೈಂಟಿಯಲ್ಲಿ 2400 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದಕ್ಕೆ 21,400 ಕೋಟಿ ರೂ. ವೆಚ್ಚವಾಗಲಿದೆ.

ಆಂಧ್ರಪ್ರದೇಶಕ್ಕೂ ಸರ್ಕಾರ ಉಡುಗೊರೆ ನೀಡಿದೆ. ಪುನರ್ರಚನೆಯ ಸಮಯದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಆಂಧ್ರಪ್ರದೇಶಕ್ಕೆ ಸುಮಾರು 15 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ನೀಡಲಾಗುವುದು. ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ರಾಜಧಾನಿಯ ಅಗತ್ಯವನ್ನು ಒಪ್ಪಿಕೊಂಡಿದ್ದಾರೆ.

ಬಜೆಟ್ ನಲ್ಲಿ ಏನೇನಿದೆ?

ಇ-ಕಾಮರ್ಸ್ ಗಳ ಟಿಡಿಎಸ್ ದರ ಇಳಿಕೆ

ಟಿಡಿಎಸ್ ಶೇ. 1 ರಿಂದ ಶೇ.0.1 ಕ್ಕೆ ಇಳಿಕೆ

ಹೂಡಿಕೆದಾರರ ಮೇಲಿನ ಏಂಜಲ್ಸ್ ಟ್ಯಾಕ್ಸ್ ಇಳಿಕೆ

ಬಾಂಡ್, ಮ್ಯೂಚುವಲ್ ಫಂಡ್ ಗಳ ಲಾಭದ ಮೇಲೆ ತೆರಿಗೆ

ವಿದೇಶೀ ಬಂಡವಾಳ ಹೂಡಿಕೆದಾರರಿಗೆ ನೆರವು

ಸ್ಟಾರ್ಟ್ ಅಪ್ ಗಳ ಅಭಿವೃದ್ಧಿಗೆ ನೆರವು

ವೇತನ ಪಡೆಯುವ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ಲಾಭ

3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ

ಆನ್ ಲೈನ್ ವ್ಯವಹಾರಗಳಿಗೆ ಟಿಡಿಎಸ್ ಕಡಿತ

ವಿತ್ತೀಯ ಕೊರತೆ ಜಿಡಿಪಿಯ ಶೇ. 4.9 ರಷ್ಟಿದೆ

ತೆರಿಗೆ ಪದ್ಧತಿ ಸರಳೀಕರಣ

ಮೇಕ್ ಇಂಡಿಯಾ ಯೋಜನೆಗಳಿಗೆ ಒತ್ತು

ಚಿನ್ನ, ಬೆಳ್ಳಿ ಮೇಲೆ 6% ಕಸ್ಟಮ್ಸ್ ಡ್ಯೂಟಿ ಕಡಿತ

ಮೊಬೈಲ್ ಫೋನ್, ಚಾರ್ಜರ್ ಬೆಲೆ ಇಳಿಕೆ

ಮೊಬೈಲ್ ಫೋನ್ ಗಳ ಮೇಲಿನ ತೆರಿಗೆ ಇಳಿಕೆ

ಕೆಲವು ಮೆಡಿಕಲ್ ಉಪಕರಣಗಳ ಮೇಲಿನ ಕಸ್ಟಮ್ಸ್ ಡ್ಯೂಟಿ ತೆರವು

ಕ್ಯಾನ್ಸರ್ ರೋಗಿಗಳ ನೆರವಿಗೆ ಮೂರು ಔಷಧಗಳ ಮೇಲಿನ ತೆರಿಗೆ ವಿನಾಯ್ತಿ

ವಿಷ್ಣು ಪಾದ್ ಟೆಂಪಲ್ ಕಾರಿಡಾರ, ಬೋಧ್ ಗಯಾ ಟೆಂಪಲ್ ಕಾರಿಡಾರ್ ಯೋಜನೆ

ನಳಂದಾ ಯೂನಿವರ್ಸಿಟಿ ಅಭಿವೃದ್ಧಿಗೆ ನೆರವು

ಒಡಿಶಾದ ದೇವಾಲಯಗಳು, ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ನೆರವು

ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ ಫೇಸ್ 4 ಜಾರಿಗೆ

ಬಿಹಾರದಲ್ಲಿ ನೆರೆ ನಿಯಂತ್ರಣಕ್ಕೆ ಯೋಜನೆ

ಮೂಲಸೌಕರ್ಯ ಅಭಿವೃದ್ಧಿಗೆ 11 ಲಕ್ಷ ಕೋಟಿ

ಅಸ್ಸಾಂ ನೆರೆ ನಿರ್ವಹಣೆ ಯೋಜನೆಗಳಿಗೆ ಅನುದಾನ

ಹಿಮಾಚಲ ಪ್ರದೇಶ ಪುನರ್ ನಿರ್ಮಾಣಕ್ಕೆ ಒತ್ತು

ಆಸ್ತಿ ಖರೀದಿಯಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆ

ಉತ್ತರಾಖಂಡ ಮೇಘಸ್ಪೋಟ, ನೆರೆ ಹಾವಳಿಗೆ ನೆರವು

ಮಹಿಳಾ ನಿರ್ದಿಷ್ಟ ಕೌಶಲ್ಯ ಯೋಜನೆ, ವಸತಿ ನಿಲಯಗಳ ನಿರ್ಮಾಣ

ಮಹಿಳೆಯರ ಉದ್ಯೋಗಕ್ಕೆ ವಿಶೇಷ ಒತ್ತು

ಸ್ಟ್ರೀಟ್ ಫುಡ್ ಹಬ್ ಗಳ ಅಭಿವೃದ್ಧಿಗೆ ಪ್ರೋತ್ಸಾಹ

ಪಿಎಂ ಸ್ವನಿಧಿ ಯೋಜನೆಯಡಿ ಒತ್ತು

ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ

ರೂಫ್ ಟಾಪ್ ಸೋಲಾರ್ ಶಕ್ತಿ ಯೋಜನೆ ಜಾರಿಗೆ

300 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ

ಪ್ರಧಾನಿ ಆವಾಸ್ ಯೋಜನೆಗೆ 10 ಲಕ್ಷ ಕೋಟಿ ಮೀಸಲು

3 ಕೋಟಿ ಹೊಸ ಮನೆಗಳ ನಿರ್ಮಾಣ

ಉದ್ಯೋಗ ಸೃಷ್ಟಿಗೆ ಶಿಪ್ಪಿಂಗ್ ಉದ್ಯಮಕ್ಕೆ ಪ್ರೋತ್ಸಾಹ

ಪಿಪಿಪಿ ಮಾದರಿಯಲ್ಲಿ ಬಾಡಿಗೆ ಮನೆಗಳ ನಿರ್ಮಾಣ

ಕೈಗಾರಿಕಾ ನೌಕರರಿಗೆ ಡಾರ್ಮೆಂಟರಿ ರೀತಿ ಬಾಡಿಗೆ ಮನೆಗಳು

ದೊಡ್ಡ ಕಂಪನಿಗಳಲ್ಲಿ ಯುವಕರಿಗೆ ಉದ್ಯೋಗ ತರಬೇತಿ, ತಿಂಗಳಿಗೆ 5 ಸಾವಿರ ಪ್ರೋತ್ಸಾಹ ಧನ

12 ಕೈಗಾರಿಕಾ ಪಾರ್ಕ್ ಗಳ ಸ್ಥಾಪನೆ

ಆಂಧ್ರಪ್ರದೇಶಕ್ಕೆ 15 ಸಾವಿರ ವಿಶೇಷ ಆರ್ಥಿಕ ಪ್ಯಾಕೇಜ್

ಬಿಹಾರ್, ಆಂಧ್ರಪ್ರದೇಶಕ್ಕೆ ಬಂಪರ್ ಕೊಡುಗೆ

ಅಮೃತ್ ಸರ್-ಗಯಾ ಆರ್ಥಿಕ ಕಾರಿಡಾರ್

ಎಂಎಸ್ ಎಂಇ ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಒತ್ತು

ಉತ್ಪಾದನಾ ವಲಯದಲ್ಲಿ ಗ್ಯಾರಂಟಿ ಯೋಜನೆ

ಎಂಎಸ್‌ಎಂಇ ಕಾರ್ಮಿಕರ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಪ್ರೋತ್ಸಾಹ

ಮುದ್ರಾ ಯೋಜನೆಯಡಿ ಸಾಲ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣ

4 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಯೋಜನೆ

ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಯೋಜನೆ

ಯುವಕರ ಉದ್ಯೋಗಕ್ಕಾಗಿ ಐದು ಹೊಸ ಯೋಜನೆ
ಬಿಹಾರದಲ್ಲಿ ರೈಲ್ವೇ ಯೋಜನೆಗಳಿಗೆ 26 ಸಾವಿರ ಕೋಟಿ
ಬಿಹಾರದಲ್ಲಿ ಹೊಸ ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಾಣ
ಆಂಧ್ರಪ್ರದೇಶದ ಕೈಗಾರಿಕೆಗಳ ಮೂಲಸೌಕರ್ಯಾಭಿವೃದ್ಧಿಗೆ ಸಹಾಯ
ವಿಶಾಖಪಟ್ಟಣ ಇಂಡಸ್ಟ್ರಿಯಲ್ ಕಾರಿಡಾರ್, ಹೈದರಾಬಾದ್-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಸಹಾಯ
ಆಂಧ್ರಪ್ರದೇಶ ರಾಜಧಾನಿ ನಿರ್ಮಾಣಕ್ಕೆ ಆರ್ಥಿಕ ಸಹಾಯ
ಉನ್ನತ ಶಿಕ್ಷಣಕ್ಕೆ 10 ಲಕ್ಷದವರೆಗೆ ಸಾಲ
ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಸಾಲ
5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿಗೆ ನೆರವು
ತರಕಾರಿ ಬೆಳೆಗಳ ಉತ್ಪನ್ನಕ್ಕೆ ರೈತರಿಗೆ ಪ್ರೋತ್ಸಾಹ
ತರಕಾರಿಗಳ ಸಂಗ್ರಹಕ್ಕೆ ದಾಸ್ತಾನು ವ್ಯವಸ್ಥೆ
ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ
ಉದ್ಯೋಗ ಹೆಚ್ಚಳಕ್ಕೆ ಮೂರು ಯೋಜನೆ
ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಉತ್ತೇಜನ
ನೈಸರ್ಗಿಕ ಕೃಷಿಗೆ ಉತ್ತೇಜನಕ್ಕೆ ಯೋಜನೆ

ಆಂಧ್ರಪ್ರದೇಶ ರಾಜಧಾನಿ ನಿರ್ಮಾಣಕ್ಕೆ ಆರ್ಥಿಕ ಸಹಾಯ

ಉನ್ನತ ಶಿಕ್ಷಣಕ್ಕೆ 10 ಲಕ್ಷದವರೆಗೆ ಸಾಲ

ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಸಾಲ

5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿಗೆ ನೆರವು

ತರಕಾರಿ ಬೆಳೆಗಳ ಉತ್ಪನ್ನಕ್ಕೆ ರೈತರಿಗೆ ಪ್ರೋತ್ಸಾಹ

ತರಕಾರಿಗಳ ಸಂಗ್ರಹಕ್ಕೆ ದಾಸ್ತಾನು ವ್ಯವಸ್ಥೆ

ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ

ಉದ್ಯೋಗ ಹೆಚ್ಚಳಕ್ಕೆ ಮೂರು ಯೋಜನೆ

ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಉತ್ತೇಜನ

ನೈಸರ್ಗಿಕ ಕೃಷಿಗೆ ಉತ್ತೇಜನಕ್ಕೆ ಯೋಜನೆ

ಕೃಷಿ ಕ್ಷೇತ್ರದಲ್ಲಿ ಡಿಜಿಟಲೀಕರಣ

Share this article

ಟಾಪ್ ನ್ಯೂಸ್