Breaking:

156 ಔಷಧಗಳನ್ನು ನಿಷೇಧಿಸಿದ ಕೇಂದ್ರ ಸರಕಾರ; ಜ್ವರ, ಶೀತ ಎಂದು ಮನೆಯಲ್ಲೇ ಈ ಮಾತ್ರೆ ತೆಗೆದುಕೊಳ್ಳುವವರಿಗೆ ಈ ಮಾಹಿತಿ ತಿಳಿದಿರಲಿ

156 ಬಗೆಯ ಔಷಧಗಳನ್ನು ಕೇಂದ್ರ ಸರಕಾರ ಗುರುವಾರ ನಿಷೇಧಿಸಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಔಷಧ ರಾಸಾಯನಿಕಗಳ ಸಂಯೋಜನೆಯ ಫಿಕ್ಸೆಡ್ ಡೋಸ್ ಡ್ರಗ್ಸ್‌ಗಳನ್ನು (ಎಫ್‌ಡಿಸಿ) ಕಾಕ್‌ಟೈಲ್ ಡ್ರಗ್ಸ್‌ ಎಂದೂ ಕರೆಯಲಾಗುತ್ತದೆ. ಹೀಗಾಗಿ ಈ ಮಾತ್ರೆಗಳು ಸೇವನೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗಿದೆ.

ಮಾನವ ಜೀವ ಕಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಗುಣಗಳುಳ್ಳ ಔಷಧಗಳನ್ನು 1940ರ ಡ್ರಗ್‌ ಮತ್ತು ಕಾಸ್ಮೆಟಿಕ್ ಕಾಯಿದೆ ಸೆ.26ಎ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಆ ಮಾತ್ರೆಗಳು ಅಂದರೆ ಅಸೆಕ್ಲೊಫೆನಾಕ್ 50ಎಂಜಿ+ ಪ್ಯಾರಸಿಟಿಮಲ್ 125 ಎಂಜಿ, ಮೆಫೆನಾಮಿಕ್ ಆಸಿಡ್ + ಪ್ಯಾರಸಿಟಮಲ್ ಇಂಜೆಕ್ಸನ್, ಸಿಟ್ರಿಝಿನ್ ಎಚ್‌ಸಿಐ+ ಪ್ಯಾರಸಿಟಮಲ್+ ಫೆನೈಲಿಫ್ರಿನ್ ಎಚ್‌ಸಿಟಿ ಸೇರಿದಂತೆ 156 ಎಫ್‌ಡಿಸಿ ಔಷಧಗಳ ಉತ್ಪಾದನೆ, ಮಾರಾಟ, ವಿತರಣೆ ಮೇಲೆ ನಿಷೇಧ ಹೇರಲಾಗಿದೆ.

ಎಫ್‌ಡಿಸಿ ಅಂದರೆ ಫಿಕ್ಸೆಡ್ ಡೋಸ್ ಕಾಂಬಿನೇಷನ್ ಎಂದು ಕರೆಯಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳನ್ನು ಇವು ಹೊಂದಿರುತ್ತವೆ. ಇದನ್ನು ಕಾಕ್‌ಟೈಲ್ ಡ್ರಗ್ಸ್‌ ಎಂದೂ ಕೂಡ ಕರೆಯಲಾಗುತ್ತದೆ.
ಎಫ್‌ಡಿಸಿ ಔಷಧಿಗಳು ಮಾನವನಿಗೆ ಭಾರೀ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸರಿಯಾಗಿ ಪರಿಗಣಿಸಿ ಅವುಗಳ ಮೇಲೆ ನಿಷೇಧ ಹೇರಿದೆ. ಇದರ ಜೊತೆಗೆ ಪ್ಯಾರೆಸಿಟಮಾಲ್, ಟ್ರಮಾಡಾಕ್, ಟೌರಿನ್ ಮತ್ತು ಕೆಫೀನ್ ಜೊತೆ ಗೂಡಿ ತಯಾರಿಸುವ ಮಾತ್ರೆಗಳನ್ನು ಕೇಂದ್ರ ನಿಷೇಧಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಆಗಸ್ಟ್‌ 12ರಂದು ಹೊರಡಿಸಿರುವ ಗೆಜೆಟ್ ಅಧಿಸೂಚನೆಯ ಪ್ರಕಾರ, ಕೆಲವು ಫಾರ್ಮಾ ಕಂಪನಿಗಳು ತಯಾರಿಸುವ ನೋವು ನಿವಾರಕ ಔ‍ಷಧಿಗಳಲ್ಲಿ ಒಂದಾದ ‘Aceclofenac 50mg + Paracetamol 125 mg’ ಮಾತ್ರೆಯನ್ನು ಸರ್ಕಾರ ನಿಷೇಧಿಸಿದೆ.

Share this article

ಟಾಪ್ ನ್ಯೂಸ್