ದುರಂತಗಳು ಮತ್ತು ಗಂಭೀರ ಅಪಘಾತಗಳ ವಿಡಿಯೋಗಳನ್ನು ಪ್ರಸಾರ ಮಾಡುವಾಗ ದೃಶ್ಯಗಳ ಮೇಲೆ ಅಪಘಾತ ಅಥವಾ ದುರಂತ ಸಂಭವಿಸಿದ ಸಮಯ, ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರಮುಖ ದುರಂತಗಳು ಮತ್ತು ಗಂಭೀರ ಅಪಘಾತಗಳ ವಿಡಿಯೋ ಪ್ರಸಾರ ಮಾಡುವಾಗ ದೃಶ್ಯಗಳ ಮೇಲೆ ಅವು ಸಂಭವಿಸಿದ ದಿನಾಂಕ ಮತ್ತು ಸಮಯ ನಮೂದಿಸಬೇಕೆಂದು ಎಲ್ಲಾ ಸುದ್ದಿ ವಾಹಿನಿಗಳಿಗೆ ಹೇಳಿದೆ.
ನೈಸರ್ಗಿಕ ವಿಕೋಪಗಳು, ಪ್ರಮುಖ ಅಪಘಾತಗಳ ಪ್ರಸಾರವನ್ನು ಹಲವು ದಿನಗಳವರೆಗೆ ವಾಹಿನಿಗಳು ತೋರಿಸುತ್ತವೆ. ಆದರೆ, ಘಟನೆ ನಡೆದ ದಿನದ ದೃಶ್ಯಗಳನ್ನು ತೋರಿಸುತ್ತಲೇ ಇರುತ್ತವೆ. ಅಪಘಾತ ಅಥವಾ ದುರಂತದ ನಂತರ ಹಲವಾರು ದಿನಗಳ ನಂತರ ತೋರಿಸಿರುವ ದೃಶ್ಯಾವಳಿಗಳು ನೈಜ ಸಮಯದ ನೆಲದ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಇದು ವೀಕ್ಷಕರಲ್ಲಿ ಅನಗತ್ಯ ಗೊಂದಲ ಮತ್ತು ಸಂಭಾವ್ಯ ಭೀತಿಗೆ ಕಾರಣವಾಗುತ್ತದೆ ಎಂದು ಹೇಳಿದೆ.