ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬೆಂಗಾವಲು ಪಡೆಯನ್ನು ಬಿಟ್ಟು ಬೈಕ್ ನಲ್ಲಿ ಪರಾರಿಯಾಗಿರುವ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ.
ಕೇಂದ್ರ ಸಚಿವ ಮತ್ತು ಬಿಹಾರದ ಬೇಗುಸರಾಯ್‌ನ ಬಿಜೆಪಿ ಸಂಸದರಾದ ಗಿರಿರಾಜ್ ಸಿಂಗ್ ಅವರಿಗೆ ತಮ್ಮ ಸ್ವಂತ ಕ್ಷೇತ್ರದಲ್ಲಿ ಪ್ರತಿಭಟನಾಕಾರರು ಘೇರಾವ್ ಹಾಕಿದ್ದಾರೆ. ಈ ವೇಳೆ ಸಚಿವರು ಪರಾರಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲು ಬಂದ ಎಎನ್‌ಎಂ(ವೈದ್ಯಕೀಯ) ಕಾರ್ಯಕರ್ತರು ಗಿರಿರಾಜ್ ಸಿಂಗ್ ಅವರ ವಾಹನಕ್ಕೆ ಘೇರಾವ್ ಹಾಕಿದ್ದಾರೆ. ಆದರೆ ಮನವಿ ಸ್ವೀಕರಿಸದೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಎಎನ್‌ಎಂ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
अपने ही संसदीय क्षेत्र में केंद्रीय मंत्री का भारी विरोध: हड़ताली ANM ने गिरिराज सिंह के काफिले को रोका, गाड़ी छोड़कर बाइक से भागे बीजेपी नेता#Bihar #Biharnews pic.twitter.com/oDZ4oAMfu2
— FirstBiharJharkhand (@firstbiharnews) August 4, 2024