Breaking:

ಸಿಕ್ಕಾಪಟ್ಟೆ ತಿನ್ನುವುದಕ್ಕೆ ಹೆಸರುವಾಸಿಯಾಗಿದ್ದ ಯುವತಿ ಸ್ಪರ್ಧೆಯ ನೇರಪ್ರಸಾರದ ವೇಳೆಯೇ ಮೃತ್ಯು

ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಜಾಲತಾಣದ ತಾರೆಯೊಬ್ಬರು ಕಾರ್ಯಕ್ರಮದ ನೇರ ಪ್ರಸಾರದ ವೇಳೆಯೇ ಮೃತಪಟ್ಟ ಘಟನೆ ಚೀನಾದಲ್ಲಿ ನಡೆದಿದೆ.

ಜುಲೈ 14ರಂದು ಈ ಘಟನೆ ನಡೆದಿದೆ. ಪ್ಯಾನ್ ಕ್ಸಿಯಾಟಿಂಗ್(24) 10 ಗಂಟೆಗಳಿಗೂ ಹೆಚ್ಚು ಕಾಲ ತಿನ್ನುವಂತಹ ಸವಾಲುಗಳನ್ನು ಸ್ವೀಕರಿಸಿ ಹೆಸರುವಾಸಿಯಾಗಿದ್ದರು.

ಕ್ಸಿಯಾಟಿಂಗ್ ಪ್ರತಿ ಊಟಕ್ಕೆ 10 ಕೆಜಿ ಆಹಾರವನ್ನು ಸೇವಿಸುತ್ತಿದ್ದರು. ಆಕೆಯ ಪೋಷಕರು ಮತ್ತು ಹಿತೈಷಿಗಳ ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ, ಕ್ಸಿಯಾಟಿಂಗ್ ಅದನ್ನು ಮುಂದುವರಿಸಲು ನಿರ್ಧರಿಸಿದ್ದರು ಎಂದು ವರದಿಯು ಉಲ್ಲೇಖಿಸಿದೆ.

ಕ್ಸಿಯಾಟಿಂಗ್ ಅವರ ಮರಣೋತ್ತರ ವರದಿಯಲ್ಲಿ, ಆಕೆಯ ಹೊಟ್ಟೆಯು ವಿರೂಪಗೊಂಡಿದೆ ಮತ್ತು ಜೀರ್ಣವಾಗದ ಆಹಾರವನ್ನು ಹೊಂದಿದೆ ಎಂದು ಹೇಳಿದೆ.

Share this article

ಟಾಪ್ ನ್ಯೂಸ್