Breaking:

ವಯನಾಡು ಭೂಕುಸಿತಕ್ಕೆ ಮೃತರ ಸಂಖ್ಯೆ 143ಕ್ಕೆ ಏರಿಕೆ: ಸಂಪರ್ಕಕ್ಕೆ ಸಿಗದ ಚಾಮರಾಜನಗರದ ಎರಡು ಕುಟುಂಬದ ಸದಸ್ಯರು

ಚಾಮರಾಜನಗರ: ಕೇರಳದ ವಯನಾಡು ಜಿಲ್ಲೆಯ ಗುಡ್ಡೆ ಕುಸಿತದ ಸ್ಥಳದಿಂದ ಈಗಾಗಲೇ 143 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಹಲವರು ಇನ್ನು ಕೂಡ ನಾಪತ್ತೆಯಾಗಿದ್ದಾರೆ.

ಗುಡ್ಡ ಕುಸಿದ ಪರಿಣಾಮ ಭಾರೀ ಸಾವು-ನೋವು ಸಂಭವಿಸಿದೆ. ಈ ದುರಂತದಲ್ಲಿ ಚಾಮರಾಜನಗರದ ದಂಪತಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 3-4 ವರ್ಷಗಳಿಂದ ಚೂರಲ್​ಮಲನಲ್ಲಿ ಕೆಲಸ ಮಾಡಿಕೊಂಡಿದ್ದ ಚಾಮರಾಜನಗರದ ಸೋಮವಾರಪೇಟೆಯ ದಂಪತಿ ರತ್ನಮ್ಮ ಹಾಗೂ ರಾಜೇಂದ್ರ ನಾಪತ್ತೆಯಾಗಿದ್ದಾರೆ.

ದುರಂತದ ಬಳಿಕ ಚಾಮರಾಜನಗರದಲ್ಲಿರುವ ಕುಟುಂಬಸ್ಥರು, ರತ್ನಮ್ಮ ಹಾಗೂ ರಾಜೇಂದ್ರ ದಂಪತಿಗೆ ಕರೆ ಮಾಡಿದ್ದಾರೆ. ಆದರೆ ದಂಪತಿ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ.

ಇದಲ್ಲದೆ ಚಾಮರಾಜನಗರದ ಮತ್ತೊಂದು ಕುಟುಂಬ ಕೂಡ ನಾಪತ್ತೆಯಾಗಿದೆ. ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿರುವ ಝಾನ್ಸಿರಾಣಿ ಅವರು ವಯನಾಡು ಜಿಲ್ಲೆಯ ಮುಂಡಕೈ ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಅದೇ ಸ್ಥಳದಲ್ಲೇ ಗುಡ್ಡ ಕುಸಿದ್ದಿದ್ದು, ಝಾನ್ಸಿರಾಣಿ ಮತ್ತು ಎರಡುವರೆ ವರ್ಷದ ಮಗು ನಿಹಾಲ್ ಕಾಣೆಯಾಗಿದ್ದಾರೆ.

 

Share this article

ಟಾಪ್ ನ್ಯೂಸ್