ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಸೋಂಕಿಗೆ ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಶಂಕಿತ ಪ್ರಕರಣದಲ್ಲಿ ಈವರೆಗೆ ಮೃತರ ಸಂಖ್ಯೆ 20ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ನ ಅಹ್ಮದಾಬಾದ್‌ನಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಚಾಂದಿಪುರ ವೈರಸ್ ಸೋಂಕಿನ ಲಕ್ಷಣವುಳ್ಳ ಕನಿಷ್ಠ 35 ಮಂದಿ ರಾಜ್ಯಾದ್ಯಂತದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಗುಜರಾತ್ ಸರಕಾರ ಪರೀಕ್ಷೆಗೆ ಕಳುಹಿಸಿದ್ದ 18 ಮಾದರಿಗಳ ಪೈಕಿ 2ರಲ್ಲಿ ಮಾತ್ರ ಚಾಂದಿಪುರ ವೈರಸ್ ಇರುವುದು ದೃಢಪಟ್ಟಿದೆ ಎಂದು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಚಾಂದಿಪುರ ವೈರಸ್ ಸೋಂಕಿನಿಂದ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಂಕಿಸಿದ್ದಾರೆ.
ಈ ವೈರಸ್ ನ್ನು ಮೊದಲು 1965ರಲ್ಲಿ ಕಂಡು ಬಂದಿದೆ ಮತ್ತು ಮಹಾರಾಷ್ಟ್ರದ ಚಂಡಿಪುರ ಗ್ರಾಮದಲ್ಲಿ ಪತ್ತೆ ಬಳಿಕ ಚಾಂದಿಪುರ ವೈರಸ್ ಹೆಸರನ್ನು ಇಡಲಾಯಿತು. ಇದು ರೇಬೀಸ್‌ಗೆ ಕಾರಣವಾಗುವ ಲೈಸಾವೈರಸ್‌ನಂತಹ ಇತರ ವೈರಸ್‌ಗಳನ್ನು ಒಳಗೊಂಡಿರುತ್ತದೆ.
ಈ ವೈರಸ್ಅ ನಿಂದ ಅತಿಯಾದ ಜ್ವರ, ಅತಿಸಾರ, ವಾಂತಿ, ಮೈಕೈ ಸೆಳೆತ, ಶೀತ ಸೇರಿದಂತೆ ರೋಗಲಕ್ಷಣಗಳು ಕಂಡು ಬರುತ್ತದೆ. ಕೆಲವು ಸಂದರ್ಭಗಳಲ್ಲಿ ವೈರಲ್ ಸೋಂಕು ಕೋಮಾ ಮತ್ತು ಸಾವಿಗೆ ಕಾರಣವಾಗುತ್ತದೆ.