Breaking:

ಬಸ್ ನಿಲ್ಧಾಣದಲ್ಲಿ ನಿಲ್ಲಿಸಿದ್ದ ಬಸ್ ನ್ನೇ ಕಳ್ಳತನ ಮಾಡಿದ ಕಳ್ಳರು!

ಚಿತ್ರದುರ್ಗ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾದ ಘಟನೆ ಚಿತ್ರದುರ್ಗದಿಂದ ವರದಿಯಾಗಿದೆ.

ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ  ನಿಲ್ಲಿಸಿದ್ದ ಬಸ್ ನ್ನು ಜುಲೈ 19 ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಳ್ಳರು ಕದ್ದು ಎಸ್ಕೇಪ್ ಆಗಿದ್ದಾರೆ.

ನಾಯಕನಹಟ್ಟಿ ಮೂಲದ ಎಸ್‌ಆರ್‌ಇ ಬಸ್‌ ಮಾಲೀಕ ಸಯ್ಯದ್‌ ಅನ್ವರ್ ಬಾಷ ಅವರಿಗೆ ಸೇರಿದ ಎಸ್‌ಆರ್‌ ಎಕ್ಸ್‌ಪ್ರೆಸ್‌ ಬಸ್ ಕಳವು ಮಾಡಲಾಗಿದೆ.

ಚಿತ್ರದುರ್ಗ- ಚಳ್ಳಕೆರೆ- ಜಗಳೂರು ಮಾರ್ಗದಲ್ಲಿ ಬಸ್‌ ಓಡಾಟ ನಡೆಸುತ್ತಿತ್ತು. ರಾತ್ರಿ ವೇಳೆ ಚಿತ್ರದುರ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ಇರುತ್ತಿತ್ತು.

ಬಸ್‌ ನ್ನು ದಾವಣಗೆರೆ ಮಾರ್ಗವಾಗಿ, ಹುಬ್ಬಳ್ಳಿ ಕಡೆ ತೆಗದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿತ್ರದುರ್ಗ ನಗರ ಠಾಣೆ ಸಿಪಿಐ ತಿಪ್ಪೇಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Share this article

ಟಾಪ್ ನ್ಯೂಸ್