ಮಕ್ಕಳು ಊಟ, ತಿಂಡಿ, ಕಾಫಿಯಿಂದ ಹಿಡಿದು ಮಲಗುವ ವರೆಗೂ ಮೊಬೈಲ್ ನಲ್ಲಿ ಆಟವಾಡುತ್ತಿರುತ್ತಾರೆ. ಮೊಬೈಲ್ ಕೊಟ್ಟಿಲ್ಲ ಎಂದರೆ ಮಕ್ಕಳು ಹಠ ಹಿಡಿದು ಅಳುತ್ತಿರುತ್ತದೆ.
ಹೆಚ್ಚು ಸಮಯ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂಬುದು ನಮಗೆ ತಿಳಿದೇ ಇದೆ. ದೃಷ್ಟಿ ದೋಷ, ಶ್ರವಣ ದೋಷ ಸೇರಿ ಹತ್ತು ಹಲವು ಸಮಸ್ಯೆಗೆ ನಾವು ಒಳಗಾಗುತ್ತೇವೆ. ಆದರೆ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾದರೆ ಮಕ್ಕಳಿಗೆ ಯಾವ ಸಮಸ್ಯೆ ಉಂಟಾಗುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ…
ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹಾನಿ
ಮೊಟ್ಟ ಮೊದಲನೆಯದಾಗಿ ಮಕ್ಕಳು ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದಾಗಿ ಅವರು ಗೇಮ್ ಆಡುವುದು, ವಿಡಿಯೋ ನೋಡುವುದರಿಂದ ಹೈ ಕಲರ್ ಡಿಸ್‌ಪ್ಲೇ, ಫಾಸ್ಟ್ ಮೂವಿಂಗ್ ವಸ್ತುಗಳ ನೋಡಿ ಹೊರಗಿನ ಪ್ರಪಂಚ ಅವರಿಗೆ ಸ್ಲೋ ಎನಿಸಲು ಆರಂಭಿಸುತ್ತೆ. ಇದರಿಂದ ಮೊಬೈಲ್ ಬಿಟ್ಟು ಬೇರೆ ಕೆಲಸ ಮಾಡಲು ಮನಸಾಗುವುದಿಲ್ಲ. ಜೊತೆಗೆ ಮೊಬೈಲ್ ರೀತಿ ಪುಸ್ತಕ ಅವರಿಗೆ ಕಲರ್‌ಫುಲ್ ಆಗಿ, ಇಂಟರೆಸ್ಟಿಂಗ್ ವಸ್ತು ಎನಿಸುವುದಿಲ್ಲ. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ.
ಮಾತು ತಡವಾಗುತ್ತೆ
ಮೊಬೈಲ್ ಬಳಕೆಯಲ್ಲಿ ಈಗಷ್ಟೇ ಮಾತನಾಡಲು ಕಲಿಯುತ್ತಿರುವ ಎಲೆಮಗುವಿನಲ್ಲಿ ಸ್ಪೀಚ್ ಡಿಲೆ ಆಗುತ್ತದೆ. ಮಗುವಿನ ಮಾತನಾಡುವ ಶಕ್ತಿಯೇ ಇಲ್ಲವಾಗುತ್ತದೆ. ಮಗು ಮೊಬೈಲ್ ನೋಡಲು ಮುಂದಾಗುವುದರಿಂದ ಮನೆಯಲ್ಲಿ ಯಾರಾ ಮಾತುಗಳು ಸಹ ಮಗುವಿನ ಬುದ್ಧಿಶಕ್ತಿಗೆ ನಿಲುಕದಂತಾಗುತ್ತದೆ. ಹೀಗಾಗಿ ಮಗು ಮಾತನಾಡುವುದನ್ನು ಕಲಿಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಕಣ್ಣಿನ ಸಮಸ್ಯೆ
ಕೋವಿಡ್ ಬಳಿಕ ಮಕ್ಕಳ ಮೊಬೈಲ್ ಸ್ಕ್ರೀನಿಂಗ್ ಸಮಯವು ಹೆಚ್ಚಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಶಾಲೆಯಲ್ಲೂ ಆನ್‌ಲೈನ್ ಕ್ಲಾಸ್‌ಗಳು, ಮಕ್ಕಳ ವಾಟ್ಸಾಪ್ ಗ್ರೂಪ್‌ಗಳು ಮಾಡಿರುವುದು ಸಹ ಕಾರಣವಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಸ್ ಎಂಬ ಕಣ್ನಿನ ಸಮಸ್ಯೆಗೆ ಕಾರಣವಾಗಿದೆ. ಈ ಕಾಯಿಲೆಯಿಂದ ಶಾಶ್ವತ ದೃಷ್ಠಿದೋಷದಂತ ಸಮಸ್ಯೆಗೆ ಮಕ್ಕಳು ಒಳಗಾಗುತ್ತಾರೆ. ಇದು ಕೋವಿಡ್ ಬಳಿಕ ಹೆಚ್ಚಳವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ಚಿಕ್ಕ ಮಕ್ಕಳಲ್ಲ ಕಾರ್ನಿಯಲ್ ಸಮಸ್ಯೆಗೆ ಇದು ಕಾರಣವಾಗುತ್ತಿದೆ. ಹೆಚ್ಚು ಬ್ಲೂ ರೇ ಕಿರಣಗಳು ಕಣ್ಣಿಗೆ ಬೀಳುವುದು ಚಿಕ್ಕ ವಯಸ್ಸಿನಲ್ಲಿ ಕನ್ನಡಕ ಬಳಸುವಂತೆ ಮಾಡುತ್ತಿದೆ.
ನಿದ್ರಾ ಭಂಗ
ಮಕ್ಕಳು ಸ್ನೇಹಿತರೊಂದಿಗೆ ಮಾತನಾಡುವುದು, ಆಟಗಳನ್ನು ಆಡುವುದು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಕ್ರೋಲಿಂಗ್ ಮಾಡುವುದು ಕಾಲಾನಂತರದಲ್ಲಿ ಆಯಾಸ ಮತ್ತು ಚಡಪಡಿಕೆಗೆ ಕಾರಣವಾಗುತ್ತದೆ. ಇದು ಶೈಕ್ಷಣಿಕ ಜೀವನವನ್ನು ಸಹ ಅಡ್ಡಿಪಡಿಸುತ್ತದೆ, ಏಕೆಂದರೆ ಮಕ್ಕಳಿಗೆ ಶಾಲೆಯಲ್ಲಿ ಕಲಿಸುವ ವಿಷಯಗಳ ಮೇಲೆ ಕೇಂದ್ರೀಕರಣ ಕಷ್ಟವಾಗುತ್ತದೆ.ನಿದ್ರೆಗೆ ಕೂಡ ಭಂಗ ಉಂಟಾಗುತ್ತದೆ.