ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ನಗರದ ಐಯುಡಿಪಿ ಲೇಔಟ್ ನಲ್ಲಿ ನಡೆದಿದೆ.
ಮಂಜುನಾಥ (38) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಎರಡು ವರ್ಷಗಳ ಹಿಂದೆ ಚೇತನ ಎಂಬಾಕೆ ಜತೆ ಮಂಜುನಾಥ್ ವಿವಾಹವಾಗಿದ್ದರು.
ಮಂಜುನಾಥ್ ಗೆ ಪತ್ನಿ ಚೇತನ ಪತಿ ಕಿರುಕುಳ ನೀಡುತ್ತಿದ್ದರು ಎಂದು ಚೇತನಾ ವಿರುದ್ಧ ಮಂಜುನಾಥ್ ಪೋಷಕರು ಆರೋಪಿಸಿದ್ದಾರೆ.
ಜಿಲ್ಲಾಸ್ಪತ್ರೆ ಸಿಟಿ ಸ್ಕ್ಯಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮೇಲೆ ಚೇತನ ಮಹಿಳಾ ಠಾಣೆಗೆ ದೂರು ನೀಡಿದ್ದರು. ಪತ್ನಿ ದೂರು ನೀಡಿದ ವಿಷಯ ತಿಳಿದ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.