Breaking:

ರಾಜ್ಯಪಾಲರು ಕುಮಾರಸ್ವಾಮಿ ಮನೆಯ ಕ್ಲರ್ಕಾ? ಸಿಎಂ ಇಬ್ರಾಹಿಂ ವಾಗ್ಧಾಳಿ

ಮೂಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯುಷನ್ ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಮಾಜಿ ಕೇಂದ್ರ ಸಚಿವ ಸಿಎಂ‌ ಇಬ್ರಾಹಿಂ ಕೆಂಡಾಮಂಡಲರಾಗಿದ್ದು, ರಾಜ್ಯಪಾಲರು ಕುಮಾರಸ್ವಾಮಿ ಮನೆಯ ಕ್ಲರ್ಕಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರು ಸಾಮಾನ್ಯ ಮನುಷ್ಯನ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ನಿರ್ಧಾರದ ವಿರುದ್ಧ ನಾನು ಪ್ರತಿಭಟನೆ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಟಗರು ಇದ್ದಂತೆ ಧೈರ್ಯ ಹೇಳಿದ್ದೇನೆ. ಮೊದಲು ಸಿಎಂ ಜೊತೆಯಲ್ಲಿ ನಾನು ಇರಲಿಲ್ಲ. ಆದರೆ ಈಗ ಅವರ ಜೊತೆಯಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯಪಾಲರು ಇವರ ಮನೆ ಕ್ಲರ್ಕ್? ಅಮಿತ್ ಶಾ ಮನೆ ಮುಂದೆ ಹೋಗಿ ಅಪ್ಪ ಮಗ ಏಕೆ ಕೂತಿದ್ದರು? ಸುಪ್ರೀಂಕೋರ್ಟಿಗೆ ಹೋಗಿ ಅಂತ ಕುಮಾರಸ್ವಾಮಿ ಹೇಳುತ್ತಾರೆ. ರಾಜ್ಯಪಾಲರು ಟೀಜೆ ಅಬ್ರಹಾಂಗು ಇದೇ ರೀತಿ ಹೇಳಬೇಕಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರದು ನಿತ್ಯ ತೆಗೆದು ಇಡುತ್ತೇನೆ . ನಾನು ಹಳೆ ಭೂಕೈಲಾಸ ನಾಟಕ ಬರೆದವನು ಎಲ್ಲವೂ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಭೇಟಿ ಬಳಿಕ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನ ತೀರ್ಪನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ವಿರುದ್ಧವೂ ಪ್ರಕರಣಗಳು ಇವೆ. ಅವರ ವಿರುದ್ಧ  ಪ್ರಾಸಿಕ್ಯುಷನ್ ಗೆ ಏಕೆ ಅನುಮತಿ ಕೊಟ್ಟಿಲ್ಲ? ಎಂದು ರಾಜ್ಯಪಾಲರಿಗೆ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.

Share this article

ಟಾಪ್ ನ್ಯೂಸ್