ಕಾಫಿ ಉತ್ತಮ ಪರಿಮಳ ಮತ್ತು ರುಚಿಯೊಂದಿಗೆ ಕಾಫಿ ಜನರನ್ನು ಸೆಳೆಯುತ್ತದೆ. ಕಾಫಿ ನಮ್ಮ ಆಯಾಸವನ್ನು ನಿವಾರಿಸಬಲ್ಲದು, ಮನಸ್ಥಿತಿಯನ್ನೂ ಸುಧಾರಿಸಬಲ್ಲದು.
ಎಲ್ಲಾ ರುತುವಿನಲ್ಲೂ ಇಷ್ಟಪಟ್ಟು ಕುಡಿಯುವಂತಹ ಕಾಫಿ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಹೆಚ್ಚು ಕಾಫಿ ಕುಡಿಯುವುದರಿಂದ ಆತಂಕ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಹೀಗೆ ಅನೇಕ ಸಮಸ್ಯೆಗಳಾಗುತ್ತವೆ.
ಕಾಫಿಯಲ್ಲಿ ಕೆಫೀನ್ ಎಂಬ ಉತ್ತೇಜಕವಿದೆ, ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ. ಏಕಾಗ್ರತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಒಂದು ದಿನದಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು.
ಮೆದುಳಿನ ಆರೋಗ್ಯ: ಕಾಫಿ ಕುಡಿಯುವುದರಿಂದ ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಆಲ್ಝೈಮರ್ ಮತ್ತು ಪಾರ್ಕಿನ್ಸನ್‌ನಂತಹ ಕಾಯಿಲೆಗಳ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.
ಮಧುಮೇಹಕ್ಕೆ ಮದ್ದು: ಕಾಫಿ ಕುಡಿಯುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
ತೂಕ ಇಳಿಕೆ: ಕಾಫಿ ನಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಖಿನ್ನತೆಗೆ ಪರಿಹಾರ: ಕಾಫಿ ಕುಡಿಯುವುದರಿಂದ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಬಹುದು.