ಮದುವೆ ಮನೆಯಲ್ಲಿ ಮಟನ್ ಕರಿ ವಿಚಾರವಾಗಿ ನಡೆದ ಗಲಾಟೆಯಲ್ಲಿ 10 ಮಂದಿ ಗಾಯಗೊಂಡ ವಿಲಕ್ಷಣ ಘಟನೆ ತೆಲಂಗಾಣದ ನಿಜಾಮಾಬಾದ್ನ ನವಿಪೇಟ್ನಲ್ಲಿ ನಡೆದಿದೆ.
ನವಿಪೇಟೆಯ ವಧುವಿಗೂ ನಂದಿಪೇಟ್ ಮಂಡಲದ ಬಡಗುಣ ಗ್ರಾಮದ ವರನಿಗೂ ಮದುವೆ ನಡೆಯುತ್ತಿತ್ತು. ಊಟದಲ್ಲಿ ಮಟನ್ ಕರಿ ವಿಚಾರವಾಗಿ ವಧು ಹಾಗೂ ವರನ ಸಂಬಂಧಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪ್ಲೇಟ್ಗಳು, ಗ್ಲಾಸ್ಗಳು, ಕುರ್ಚಿಗಳು ಮತ್ತು ಇತರ ವಸ್ತುಗಳ ಮೂಲಕ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ವರನ ಕಡೆಯ ಕೆಲವು ಯುವಕರು, ಕಡಿಮೆ ಮಟನ್ ಬಡಿಸಿದ್ದಾರೆ ಎಂದು ಅತೃಪ್ತಿಗೊಂಡು ಅಡುಗೆ ಸಿಬ್ಬಂದಿಯನ್ನು ಪ್ರಶ್ನಿಸುತ್ತಾ ಗಲಾಟೆ ಶರು ಮಾಡಿದ್ದಾರೆ. ಈ ವೇಳೆ ಎರಡೂ ಕಡೆಯ ಸಂಬಂಧಿಕರ ನಡುವೆ ಮಾತಿಗೆ ಮಾತು ಬೆಳೆದಿದೆ. ಅಲ್ಲದೇ ಕಲ್ಲು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ವಧು ಹಾಗೂ ವರನ ಕಡೆಯವರು ಹೊಡೆದಾಡಿಕೊಳ್ಳುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಎರಡೂ ಕಡೆಯವರನ್ನು ಕೂರಿಸಿ ಮಾತನಾಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗಲಾಟೆಯಲ್ಲಿ ಗಾಯಗೊಂಡ 10 ಮಂದಿಯನ್ನು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.